ಮರವಂತೆ (ಬೈಂದೂರು) : ಪ್ರಜಾತಂತ್ರವೆಂದರೆ ಜನರಿಂದ ರೂಪು ಗೊಂಡ ಸರ್ಕಾರದಿಂದ ನಡೆಯುವ ಆಡಳಿತ. ಜನರು ಯಾವುದೇ ಆಮಿಷ ಗಳಿಗೆ ಬಲಿಯಾಗದೆ ಪ್ರಾಮಾಣಿಕ ಮತ್ತು ಸಮರ್ಥ ಪ್ರತಿನಿಧಿಯನ್ನು ಆಯ್ಕೆ ಮಾಡಿದರೆ ಮಾತ್ರ ಅವರಿಗೆ ಉತ್ತಮ ಸರ್ಕಾರ ದೊರೆಯುತ್ತದೆ.

ಈ ಪ್ರಕ್ರಿಯೆಯ ತಳಹದಿ ಮತದಾನವಾಗಿ ರುವುದರಿಂದ ಎಲ್ಲ ಮತದಾರರು ವಿವೇಚನೆ ಬಳಸಿ ಮತದಾನ ಮಾಡುವ ಮೂಲಕ ತಮಗೆ ಸಂವಿಧಾನ ನೀಡಿದ ಮೂಲಭೂತ ಹಕ್ಕನ್ನು ತಪ್ಪದೆ ಚಲಾ ಯಿಸಬೇಕು ಮತ್ತು ಆ ಮೂಲಕ ಉತ್ತಮ ಸರ್ಕಾರ ರಚನೆಯ ಹೊಣೆ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾ ಯಿತಿ ಮುಖ್ಯ ಯೋಜನಾಧಿಕಾರಿ ವಿಜಯಕುಮಾರ ಶೆಟ್ಟಿ ಹೇಳಿದರು.

ಚುನಾವಣಾ ಆಯೋಗ, ಜಿಲ್ಲಾಡಳಿತ, ಮರವಂತೆ ಗ್ರಾಮ ಪಂಚಾಯಿತಿ ಮತ್ತು ವಿವಿಧ ಸ್ಥಳೀಯ ಇಲಾಖೆಗಳ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ನಡೆದ ಕಡ್ಡಾಯ ಮತದಾನ ಜಾಗೃತಿ ಅಭಿ ಯಾನದಲ್ಲಿ ಮತದಾನದ ಮಹತ್ವ ಮತ್ತು ಎಲ್ಲರೂ ತಪ್ಪದೇ ಮತದಾನ ಮಾಡಬೇಕಾದ ಅಗತ್ಯ ಕುರಿತು ಅವರು ಮಾತನಾಡಿದರು. ಹಾಜರಿದ್ದ ಎಲ್ಲರಿಗೆ ಮತದಾನ ಪ್ರತಿಜ್ಞೆ ಬೋಧಿಸಿದರು.

ಅಭಿವೃದ್ಧಿ ಅಧಿಕಾರಿ ಎನ್. ರಂಗನಾಥ ಸ್ವಾಗತಿಸಿದರು. ಕಾರ್ಯದರ್ಶಿ ಹರಿ ಶ್ಚಂದ್ರ ಆಚಾರ್ ವಂದಿಸಿದರು. ತಾ ಲ್ಲೂಕು ಪಂಚಾಯಿತಿ ಕಾರ್ಯ ನಿರ್ವ ಹಣಾಧಿಕಾರಿ ಅಡೊಲ್ಫಸ್ ಫರ್ನಾ ಂಡಿಸ್, ವಸತಿ ಯೋಜನೆ ನೋಡಲ್ ಅಧಿಕಾರಿ ಭೋಜ ಪೂಜಾರಿ, ಸಿಂಡಿ ಕೇಟ್ ಬ್ಯಾಂಕ್ ಅಧಿಕಾರಿ ಎಸ್. ಪ್ರಿಯಾ, ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಅಧಿಕಾರಿ ಹೊನ್ನಮ್ಮ ನಾಯ್ಕ್, ಅಂಗನವಾಡಿ ಮೇಲ್ವಿಚಾರಕಿ ಸವಿತಾ, ಸಹಕಾರ ಸಂಘದ ವ್ಯವಸ್ಥಾಪಕ ಸೋಮಯ್ಯ ಬಿಲ್ಲವ, ಗ್ರಾಮ ಕರಣಿಕ ಮಹಾಂತೇಶ್ ಕೆ.ಕೋಣೀನವರ್,

ಗ್ರಾ ಮ ಪಂಚಾಯಿತಿ ಅಧ್ಯಕ್ಷೆ ಸುಗು ಣಾ ಕೆ.ಎ, ಮಾಜಿ ಅಧ್ಯಕ್ಷ ಎಂ. ವಿನಾ ಯಕ ರಾವ್, ಸದಸ್ಯರು, ಸಿಬ್ಬಂದಿ, ಆರೋಗ್ಯ ಸಹಾಯಕ ಹುಲಿ ಯಪ್ಪ ಗೌಡ, ಶಿಕ್ಷಕರಾದ ಪಾಟೀಲ್ ಸುರೇಶ ಗೌಡ, ಹಿರಿಯಣ್ಣ ಆಚಾರ್, ಲಲಿತಾ, ಸೀತಾ ಜೋಗಿ, ಅಂಗನವಾಡಿ ಕಾರ್ಯಕರ್ತ ರು, ಆಶಾ ಕಾರ್ಯಕರ್ತರು, ಭಾರತ್ ನಿರ್ಮಾಣ್ ಸ್ವಯಂ ಸೇವಕರು, ಹಿರಿ ಯ ವಿದ್ಯಾರ್ಥಿಗಳು ಇದ್ದರು. ನಂತರ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.