ಬುಧವಾರ, ಏಪ್ರಿಲ್ 8, 2020
19 °C

ನಿರುದ್ಯೋಗ ಸಮಸ್ಯೆ ಕುರಿತು ಭಾಷಣ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಭಾರತೀಯ ಯುವ ಕಾಂಗ್ರೆಸ್ ನಿರುದ್ಯೋಗ ಸಮಸ್ಯೆ ಕುರಿತು ಮಾರ್ಚ್‌ 23ರಂದು ದೆಹಲಿಯಲ್ಲಿ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಿದೆ.

ವರ್ತಮಾನದ ತಲ್ಲಣವೇ ನಿರುದ್ಯೋಗ ಸಮಸ್ಯೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ. ಯುವಕರು ನಿರಾಶರಾಗಿದ್ದಾರೆ. ಮೋದಿ ಸರ್ಕಾರ ಜನರ ಮೇಲೆ ಮಂಕುಬೂದಿ ಎರಚಿದೆ. ಜನರ ಉದ್ಯೋಗ ಕಸಿದುಕೊಂಡಿದೆ. ಹಾಗಾಗಿ, ‘ಯುವ ಭಾರತೀಯ ಕೂಗು’ ಎಂಬ ಘೋಷಣೆ ಅಡಿ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಚ್.ಬಿ.ಗಿರೀಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸರ್ಕಾರಿ ಉದ್ಯಮಗಳು ಬಾಗಿಲು ಮುಚ್ಚುತ್ತಿವೆ. ಎಲ್‌ಐಸಿ, ಬಿಎಸ್‌ಎನ್‌ಎಲ್, ಏರ್ ಇಂಡಿಯಾ ಸೇರಿ 34ಕ್ಕೂ ಹೆಚ್ಚು ಸರ್ಕಾರಿ ಸ್ವಾಮ್ಯದ ಉದ್ಯಮಗಳು ಬಾಗಿಲು ಮುಚ್ಚುತ್ತಿವೆ. ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ಇಂತಹ ಸನ್ನಿವೇಶದ ವಿರುದ್ಧ ಯುವ ಭಾರತೀಯರ ಕೂಗು ಅನಿವಾರ್ಯವಾಗಿದೆ ಎಂದರು.

18ರಿಂದ 35 ವಯೋಮಾನದ ಯುವಕರು ಭಾಗವಹಿಸಬಹುದು. ಜಿಲ್ಲೆಯಿಂದ ಒಬ್ಬರನ್ನು ರಾಜ್ಯಕ್ಕೆ, ರಾಜ್ಯದಿಂದ ಐವರನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಯುವಕರು ತಮ್ಮ ಹೆಸರು ಆನ್‌ಲೈನ್ ಮೂಲಕ ಅಥವಾ ಮಿಸ್ಡ್‌ ಕಾಲ್‌ (81519 94411) ಕೊಡುವ ಮೂಲಕ ನೋಂದಣಿ ಮಾಡಬಹುದು. ನೋಂದಣಿಗೆ ಫೆ.29 ಕೊನೆಯ ದಿನ.  

ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪ್ರವೀಣ್, ರಾಜ್ಯ ಕಾರ್ಯದರ್ಶಿ ಕಿರಣ್, ಪ್ರಮುಖರಾದ ನಿಖಿಲ್, ಟಿ.ವಿ.ರಂಜಿತ್, ಪ್ರದೀಪ್, ಮಂಜು, ಮಾರುತಿ, ರಾಕೇಶ್, ಪ್ರಜ್ವಲ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು