ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕನ್ನಡ: 35 ಜನರಿಗೆ ಕೋವಿಡ್ 19 ದೃಢ

ಜ್ವರದ ಲಕ್ಷಣಗಳಿದ್ದ ಐವರಿಗೆ ಸೋಂಕು: ಹೊರರಾಜ್ಯ, ವಿದೇಶದಿಂದ ಬಂದವರಿಗೂ ಖಚಿತ
Last Updated 4 ಜುಲೈ 2020, 14:45 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಶನಿವಾರ 35 ಜನರಿಗೆ ಸೋಂಕು ದೃಢಪಟ್ಟಿದೆ.ಅವರಲ್ಲಿ ಐವರಿಗೆ ಜ್ವರದ ಲಕ್ಷಣಗಳಿದ್ದು (ಐ.ಎಲ್.ಐ), ಕೋವಿಡ್ಖಚಿತವಾಗಿದೆ.

ಏಳು ಮಂದಿ ಈಗಾಗಲೇ ಸೋಂಕಿತರಾದವರಪ್ರಾಥಮಿಕ ಸಂಪರ್ಕಕ್ಕೆ ಬಂದವರು. ಉಳಿದವರು, ವಿದೇಶ,ಹೊರ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಂದ ಮರಳಿದವರಾಗಿದ್ದಾರೆ. ಭಟ್ಕಳದ 16ಮಂದಿ,ಶಿರಸಿ ಹಾಗೂ ಅಂಕೋಲಾದ ತಲಾ ಆರು ಮಂದಿ,ಹೊನ್ನಾವರದ ಐವರು ಹಾಗೂ ಯಲ್ಲಾಪುರದ ಇಬ್ಬರಿಗೆ ಕೋವಿಡ್ಕಾಣಿಸಿಕೊಂಡಿದೆ.

ಭಟ್ಕಳದ ಸೋಂಕಿತರ ಪೈಕಿ 33 ವರ್ಷದ ಪುರುಷ, 22 ವರ್ಷದ ಯುವತಿ ಹಾಗೂ 42 ವರ್ಷದ ಮಹಿಳೆ ದುಬೈನಿಂದ ಮರಳಿದವರು. ಎರಡು ವರ್ಷದ ಇಬ್ಬರು ಹಾಗೂಎಂಟುವರ್ಷದಬಾಲಕಿಯರು, ನಾಲ್ಕು ವರ್ಷದ ಬಾಲಕ ಸೇರಿದಂತೆ ಒಂಬತ್ತು ಮಂದಿ ಆಂಧ್ರಪ್ರದೇಶದ ವಿಜಯವಾಡದಿಂದ ಬಂದವರಾಗಿದ್ದಾರೆ. ಮೂವರು ಉತ್ತರ ಪ್ರದೇಶದಿಂದ ಹಾಗೂ ಒಬ್ಬರು ಮುಂಬೈನಿಂದ ವಾಪಸ್ ಆದವರು ಸೇರಿದ್ದಾರೆ.

ಹೊನ್ನಾವರದ ಮೂವರು ಉಡುಪಿ ಜಿಲ್ಲೆಯ ಬೈಂದೂರಿಗೆ ಹೋಗಿ ಬಂದಿದ್ದರು. ಅವರಲ್ಲಿ ಐದು ಮತ್ತು ಏಳು ವರ್ಷದ ಬಾಲಕರಿದ್ದಾರೆ. ಇಬ್ಬರು ಮುಂಬೈನಿಂದ ಮರಳಿ ಬಂದವರಾಗಿದ್ದಾರೆ.

ಶಿರಸಿಯಲ್ಲಿ ಸೋಂಕಿತರಾದ ಆರೂ ಮಂದಿ ಹಾಗೂ ಯಲ್ಲಾಪುರದ 25 ವರ್ಷದ ಯುವಕನಾಲ್ವರುಪ್ರತ್ಯೇಕ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಒಳಗಾಗಿದ್ದರು. ಅಂಕೋಲಾದ 22 ವರ್ಷದ ಯುವಕ ಮಂಗಳೂರಿಗೆ ಹೋಗಿ ಬಂದಿದ್ದರು.

ಕಾನ್‌ಸ್ಟೆಬಲ್‌ಗೂ ಕೋವಿಡ್:ಅಂಕೋಲಾದಲ್ಲಿ ಬೀಟ್ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರಿಗೂ ಕೋವಿಡ್ ದೃಢಪಟ್ಟಿದೆ. ಅವರು ಕಂಟೈನ್‌ಮೆಂಟ್ ವಲಯಕ್ಕೆ ಹೋಗಿ ಬಂದಿದ್ದರು.

ಉಳಿದಂತೆ, ಶಿರಸಿಯ ಸಬ್‌ಜೈಲ್‌ನ ಮೂವರು ಸಿಬ್ಬಂದಿ ಕೋವಿಡ್ ಪೀಡಿತಕಳವು ಆರೋಪಿಯ(ರೋಗಿ ಸಂಖ್ಯೆ 12057) ಪ್ರಾಥಮಿಕ ಸಂಪರ್ಕಕ್ಕೆ ಬಂದು ಸೋಂಕಿತರಾಗಿದ್ದಾರೆ. ನಗರದ ಎರಡು ಆಸ್ಪತ್ರೆಗಳ ಇಬ್ಬರು ಸಿಬ್ಬಂದಿಯೂಇಬ್ಬರು ಸೋಂಕಿತರ ಸಂಪರ್ಕಕ್ಕೆ ಬಂದ ಕಾರಣ ಕೋವಿಡ್ ಖಚಿತವಾಗಿದೆ.

ಅಂಕೋಲಾ ತಾಲ್ಲೂಕಿನಲ್ಲಿ 91 ವರ್ಷದ ಹಿರಿಯ ವ್ಯಕ್ತಿ ಹಾಗೂ ಏಳು ವರ್ಷದ ಬಾಲಕ ಸೇರಿದಂತೆ ನಾಲ್ವರಿಗೆ,ಯಲ್ಲಾಪುರದ ಒಬ್ಬರಿಗೆ ಐ.ಎಲ್.ಐ ಲಕ್ಷಣಗಳು ಕಾಣಿಸಿಕೊಂಡಿತ್ತು. ಅವರ ಗಂಟಲುದ್ರವದ ಮಾದರಿಯನ್ನು ಪರೀಕ್ಷಿಸಿದಾಗಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT