ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಮಾಂದ್ಯ ಮಕ್ಕಳಿಗೆ ಮನೆಯಲ್ಲಿ ಪಾಠ

ಅಜಿತ ಮನೋಚೇತನಾ ಕಾರ್ಯಕ್ಕೆ ಶ್ಲಾಘನೆ
Last Updated 18 ಜೂನ್ 2020, 14:02 IST
ಅಕ್ಷರ ಗಾತ್ರ

ಶಿರಸಿ: ಕೋವಿಡ್ 19 ಕಾರಣಕ್ಕೆ ಇಲ್ಲಿನ ಅಜಿತ ಮನೋಚೇತನಾ ವಿಕಾಸ ಶಾಲೆಯ ಶಿಕ್ಷಕರು ಮಕ್ಕಳ ಮನೆಗೇ ಹೋಗಿ ಪಾಠ ಪ್ರಾರಂಭಿಸಿದ್ದಾರೆ.

ನಗರ ಹಾಗೂ ಹೊರವಲಯದಲ್ಲಿರುವ ಬುದ್ಧಿಮಾಂದ್ಯ ಮಕ್ಕಳ ಮನೆಗೆ ಹೋಗುವ ಶಾಲೆಯ ಮುಖ್ಯ ಶಿಕ್ಷಕಿ ನರ್ಮದಾ ಹೆಗಡೆ ಹಾಗೂ ಸಹ ಶಿಕ್ಷಕಿಯರು, ಮಕ್ಕಳಿಗೆ ಯೋಗ, ಭಜನೆ, ಫಿಜಿಯೊಥೆರಪಿ ಕಲಿಸುತ್ತಿದ್ದಾರೆ. ಪಾಲಕರ ಬಳಿ ಮಕ್ಕಳ ಆರೋಗ್ಯ ಸ್ಥಿತಿಯನ್ನು ವಿಚಾರಿಸಿ, ಅಗತ್ಯವಿದ್ದಲ್ಲಿ ವೈದ್ಯರ ಸಲಹೆ ಪಡೆದು, ಉಚಿತವಾಗಿ ಔಷಧ ವಿತರಿಸಿ ಬರುತ್ತಾರೆ.

ಇದರ ಜೊತೆಗೆ ಶಿಕ್ಷಕಿಯರು ವಿಶೇಷ ಮಕ್ಕಳ ಸಮೀಕ್ಷೆಯನ್ನೂ ನಡೆಸುತ್ತಿದ್ದಾರೆ. ಶಾಲೆ ಬಂದಾಗಿದ್ದರೂ, ಬುದ್ಧಿಮಾಂದ್ಯ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ವಾರಕ್ಕೆ 2–3 ಬಾರಿ ಶಿಕ್ಷಕರು, ಮಕ್ಕಳ ಮನೆಗೇ ಹೋಗಿ ಶಾಲೆಯ ಪರಿಸರ ಸೃಷ್ಟಿಸಿ ಮಕ್ಕಳಲ್ಲಿ ಉತ್ಸಾಹ ತುಂಬುತ್ತಿರುವುದಕ್ಕೆ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ. ವಿಶೇಷ ಮಕ್ಕಳ ಪಾಲಕರಲ್ಲಿ ಬಡವರು, ಶ್ರಮಿಕ ವರ್ಗಕ್ಕೆ ಸೇರಿದವರು ಹಲವರಿದ್ದಾರೆ.

ಅಜಿತ ಮನೋಚೇತನಾ ಟ್ರಸ್ಟ್ ಅಧ್ಯಕ್ಷ ಸುಧೀರ ಭಟ್ಟ ಹಾಗೂ ಕಾರ್ಯದರ್ಶಿ ಅನಂತ ಅಶೀಸರ ಅವರು, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ಮಕ್ಕಳ ಮನೆಗೇ ಹೋಗಿ ತರಬೇತಿ ನಡೆಸಲು ಶಿಕ್ಷಕಿಯರಿಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT