ಮಂಗಳವಾರ, ಡಿಸೆಂಬರ್ 7, 2021
23 °C

ಜಯಂತ ಕಾಯ್ಕಿಣಿ ಭಾಷಾಂತರ ಕೃತಿಗೆ ‘ಅಮೆರಿಕ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಅಮೆರಿಕ ಸಾಹಿತ್ಯ ಭಾಷಾಂತರಕಾರರ ಸಂಸ್ಥೆಯ (ಎ.ಎಲ್.ಟಿ.ಎ) ‘ಅಮೆರಿಕ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ಗೆ ಸಾಹಿತಿ ಜಯಂತ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್‌ ಪ್ಲೀಸ್’ ಕೃತಿಯು ಆಯ್ಕೆಯಾಗಿದೆ. ಕನ್ನಡದ ಈ ಕೃತಿಯನ್ನು ಸಾಹಿತಿ ತೇಜಸ್ವಿನಿ ನಿರಂಜನ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ.  

ಎ.ಎಲ್.ಟಿ.ಎ ಈ ಬಗ್ಗೆ ಭಾನುವಾರ ಪ್ರಕಟಿಸಿದೆ. 2021ನೇ ಸಾಲಿನ ಸಾಹಿತ್ಯ ಪ್ರಶಸ್ತಿಯನ್ನು ನವೆಂಬರ್‌ನಲ್ಲಿ ನಡೆಯುವ ಸಂಸ್ಥೆಯ 44ನೇ ಅಧಿವೇಶನದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ನಗದು ಪುರಸ್ಕಾರವನ್ನು ಒಳಗೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಾಹಿತಿ ಜಯಂತ ಕಾಯ್ಕಿಣಿ, ‘ಪ್ರಶಸ್ತಿ ಪ್ರಕಟವಾಗಿರುವುದು ತುಂಬ ಸಂತೋಷದ ವಿಷಯ. ಕನ್ನಡದ ಸಾಹಿತ್ಯದ ಭಾಷಾಂತರ ಕೃತಿಗೆ ಈ ಪ್ರಶಸ್ತಿ ಸಿಕ್ಕಿರುವುದು ನಾಡಿಗೆ ಹೆಮ್ಮೆಯ ವಿಷಯ. ಇದರಿಂದ ಇನ್ನೂ ಹೆಚ್ಚಿನ ಜನ ಈ ಪುಸ್ತಕ ಓದುವಂತಾಗುತ್ತದೆ. ಇಂಗ್ಲಿಷ್‌ಗೆ ಭಾಷಾಂತರಿಸಿದ ತೇಜಸ್ವಿನಿಯವರಿಗೆ ಅಭಿನಂದನೆ ಸಲ್ಲುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು