ಮಂಗಳವಾರ, ಫೆಬ್ರವರಿ 25, 2020
19 °C

ಕಾರವಾರ ಮೂಲದ ಅಮಿತ ಬಾಡ್ಕರ್‌ಗೆ ಆಸ್ಕರ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಈ ಬಾರಿಯ ‘ಆಸ್ಕರ್ ಪ್ರಶಸ್ತಿ’ಗೆ ಕಾರವಾರ ಮೂಲದ ಅಮಿತ ಗಣಪತಿ ಬಾಡ್ಕರ್ ಭಾಜನರಾಗಿದ್ದಾರೆ. ಹಾಲಿವುಡ್‌ನಲ್ಲಿ ನಿರ್ಮಾಣಗೊಂಡ ಅನಿಮೇಟೆಡ್‌ ಚಿತ್ರ ‘ಟಾಯ್ ಸ್ಟೋರಿ–4’ಗೆ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ ಲಭಿಸಿದೆ.

ಪ್ರಸ್ತುತ ಇವರು ಅಮೆರಿಕದಲ್ಲಿ ಅನಿಮೇಷನ್ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದು ಈ ಚಿತ್ರದಲ್ಲಿ ಸ್ಪೆಷಲ್ ಎಫೆಕ್ಟ್ ವಿಭಾಗದಲ್ಲಿ ಇವರು ಕಾರ್ಯನಿರ್ವಹಿಸಿದ್ದರು.92ನೇ ಅಕಾಡೆಮಿ ಪ್ರಶಸ್ತಿ (ಆಸ್ಕರ್ ಪ್ರಶಸ್ತಿ) ಪ್ರದಾನ ಸಮಾರಂಭ ಫೆ.9ರಂದು ಲಾಸ್‌ಎಂಜಲೀಸ್‌ನಲ್ಲಿ ನಡೆದಿತ್ತು.

ಇವರು ನಿರ್ವಹಿಸಿದ ಚಿತ್ರಗಳಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಮೂರನೇ ಚಿತ್ರ ಇದಾಗಿದೆ. 2012ರಲ್ಲಿ ‘ಬ್ರೇವ್’ 2015ರಲ್ಲಿ ‘ಇನ್‌ಸೈಡ್‌ಔಟ್‌’ ಚಿತ್ರಕ್ಕೆ ಈ ಪ್ರಶಸ್ತಿ ದೊರಕಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು