ಭಾನುವಾರ, ಜನವರಿ 26, 2020
23 °C

ಅಂಕೋಲಾ ಬಸ್ ನಿಲ್ದಾಣ ಕಾಮಗಾರಿ ತನಿಖೆ: ಶಾಸಕಿ ರೂಪಾಲಿ ನಾಯ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಅಂಕೋಲಾ ಬಸ್ ನಿಲ್ದಾಣದ ಕಳಪೆ ಹಾಗೂ ಅಸಮರ್ಪಕ ಕಾಮಗಾರಿ ಕುರಿತು ಸಾರಿಗೆ ಸಚಿವರ ಮೂಲಕ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

ಬಸ್ ನಿಲ್ದಾಣದ ಕಾಮಗಾರಿಯು 2019ರ ಏಪ್ರಿಲ್‌ಗೇ ಪೂರ್ಣಗೊಳ್ಳಬೇಕಿತ್ತು. ಆದರೆ, ಇದುವರೆಗೂ ಆಗಿಲ್ಲ. ಕಳಪೆ ಕಾಮಗಾರಿ, ವಿಳಂಬ, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದ ಬಗ್ಗೆ ಈಗಾಗಲೇ ಸಾರಿಗೆ ಸಚಿವರಿಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಲಾಗಿದೆ.

‘ಕಟ್ಟಡದ ನೀಲನಕ್ಷೆ ನಮಗೆ ನೀಡಿಲ್ಲ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಅಧಿಕಾರಿಗಳು ಗುತ್ತಿಗೆದಾರರಿಗೆ ಕೊಟ್ಟಿರುವುದಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ನೀಲನಕ್ಷೆ ಇಲ್ಲದೆ ಅಡಿಪಾಯ ಹಾಕಿದ್ದು ಹೇಗೆ, ಕಾಮಗಾರಿ ನಡೆಸುತ್ತಿರುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ’ ಎಂದು ಅವರು ಹೇಳಿದ್ದಾರೆ.

‘ಅಂಕೋಲಾದಲ್ಲಿ ಜಾಗದ ಸಮಸ್ಯೆ ತೀವ್ರವಾಗಿದೆ. ಹೀಗಿರುವಾಗ ಪಟ್ಟಣದ ಹೃದಯಭಾಗದಲ್ಲಿ ಇರುವ ಸ್ಥಳವನ್ನು ಸಮರ್ಪಕವಾಗಿ ಬಳಸಿಕೊಂಡು ಬಸ್ ನಿಲ್ದಾಣ ರೂಪಿಸಬೇಕಿತ್ತು. ಹಿಂದೆ ಇದ್ದ ಬಸ್ ನಿಲ್ದಾಣವನ್ನು ತರಾತುರಿಯಲ್ಲಿ ಕೆಡವಲಾಯಿತು. ಈಗ ಬಸ್ ನಿಲ್ದಾಣದ ಕಾಮಗಾರಿ ಆಮೆಗತಿಯಲ್ಲಿದೆ. ಇದಕ್ಕೆ ಕಾರಣ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು