ಗುರುವಾರ , ಮೇ 19, 2022
23 °C

ಅಡಿಕೆಯಲ್ಲಿವೆ ಆರೋಗ್ಯಕರ ಅಂಶ: ಸಚಿವ ಆರ್.ಶಂಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

pv photo

ಶಿರಸಿ: ಅಡಿಕೆಯಿಂದ ಚಹಾ ಸೇರಿದಂತೆ ಹಲವು ಉತ್ಪನ್ನ ಸಿದ್ಧವಾಗುತ್ತಿದೆ‌. ಅದರಲ್ಲಿ ಮಧುಮೇಹ ನಿಯಂತ್ರಿಸುವ ಅಂಶಗಳೂ ಇವೆ, ಹೀಗಾಗಿ ಬೆಳೆಗಾರರು ಅಡಿಕೆ ಬಗ್ಗೆಯ ಆಕ್ಷೇಪಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ತೋಟಗಾರಿಕಾ ಇಲಾಖೆ ಸಚಿವ ಆರ್.ಶಂಕರ್ ಹೇಳಿದರು.

ನಗರದ ಮಾರಿಕಾಂಬಾ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಮಾಧ್ಯಮದವರೊಡನೆ ಮಾತನಾಡಿದ ಅವರು, 'ಅಡಿಕೆಗೆ ಸದ್ಯ ಉತ್ತಮ ದರವಿದೆ. ರೈತರು ಸಂತಸದಲ್ಲಿದ್ದಾರೆ. ತೋಟಗಾರಿಕೆ ಬೆಳೆಗಳ ಹಾನಿಗೆ ಹಂತ ಹಂತವಾಗಿ ಪರಿಹಾರ ನೀಡಲಾಗಿದೆ' ಎಂದರು.

'ರೇಷ್ಮೆ ಇಲಾಖೆಯನ್ನು ಬೇರೆ ಇಲಾಖೆ ಜತೆ ವಿಲೀನಗೊಳಿಸುವ ಪ್ರಸ್ತಾಪವಿಲ್ಲ. ಬೇರೆ ಬೇರೆ ಇಲಾಖೆಗೆ ತೆರಳಿರುವ ರೇಷ್ಮೆ ಇಲಾಖೆ ನೌಕರರನ್ನು ಮಾತೃ ಇಲಾಖೆಗೆ ಕರೆತರಲಾಗುವುದು' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು