ಬುಧವಾರ, ಏಪ್ರಿಲ್ 8, 2020
19 °C

ಬಲೆಗೆ ಬಿದ್ದ ಭಾರಿ ಗಾತ್ರದ ಕುರುಡೆ ಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದಿಂದ ಶನಿವಾರ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ಕುರುಡೆ ಜಾತಿಯ ದೊಡ್ಡ ಮೀನು ಬಿದ್ದಿದೆ. ಮೀನು ಸುಮಾರು 25 ಕೆ.ಜಿ ತೂಕವಿತ್ತೆಂದು ಮೀನುಗಾರರು ತಿಳಿಸಿದ್ದಾರೆ.

ಹುಬ್ಬಳ್ಳಿಯ ವ್ಯಾಪಾರಿಯೊಬ್ಬರು ₹ 7,500 ನೀಡಿ ಈ ಮೀನನ್ನು ಖರೀದಿಸಿದರು. ‘ಸಮುದ್ರದಲ್ಲಿ ಈ ಮೀನು ಕಾಣಸಿಗುವುದು ತೀರಾ ವಿರಳ. 15 ಕೆ.ಜಿ.ಯಿಂದ 28 ಕೆ.ಜಿ.ಯವರೆಗೂ ತೂಕವಿರುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ₹ 300ರಷ್ಟು ದರವಿದೆ. ಬುಲುಗೆ ಮೀನು ಸಹ ಇದೇ ಆಕಾರ ಮತ್ತು ಗಾತ್ರವನ್ನು ಹೊಂದಿರುತ್ತದೆ. ಅದಕ್ಕೆ ಪ್ರತಿ ಕೆ.ಜಿ.ಗೆ ₹ 3,000ದವರೆಗೆ ಬೆಲೆಯಿದೆ’ ಎಂದು ಮೀನುಗಾರರ ವಿನಾಯಕ ಹರಿಕಂತ್ರ ಮಾಹಿತಿ ನೀಡಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು