ಶನಿವಾರ, ನವೆಂಬರ್ 23, 2019
18 °C

ನಡುರಸ್ತೆಯಲ್ಲೇ ಸುಟ್ಟು ಕರಕಲಾದ ಬೈಕ್

Published:
Updated:
Prajavani

ಕಾರವಾರ: ಸಿದ್ದಾಪುರ– ಕುಮಟಾ ರಸ್ತೆಯ ದೊಡ್ಮನೆ ಘಟ್ಟದ ಬಳಿ ಸೋಮವಾರ, ನಿಯಂತ್ರಣ ತಪ್ಪಿ ಬಿದ್ದ ಬೈಕ್ ಹೊತ್ತಿ ಉರಿಯಿತು. ಬೈಕ್ ಸವಾರ, ಜಿಲ್ಲಾ ಪಂಚಾಯತಿನ ಎಂಜಿನಿಯರ್ ಮಣಿಕಂಠ ಪೂಜಾರಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದರು.

ಸಿದ್ದಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರು, ಹೊನ್ನಾವರ ತಾಲ್ಲೂಕಿನ ಕಡತೋಕದಿಂದ ಸಿದ್ದಾಪುರಕ್ಕೆ ಬಜಾಜ್ ವಿಕ್ರಾಂತ್ ಬೈಕ್‌ನಲ್ಲಿ ತೆರಳುತ್ತಿದ್ದರು. ಹುಲ್ದಾರ್ ಗದ್ದೆ ಬಳಿ ಸ್ಕಿಡ್ ಆಗಿ ಬಿದ್ದಿದ್ದು, ನೋಡ ನೋಡುತ್ತಿದ್ದಂತೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿತು.  
ವಿಷಯ ತಿಳಿದು ಸ್ಥಳೀಯರು ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. 

ದೊಡ್ಮನೆ ಘಟ್ಟವು ಕಿಡಿದಾದ ತಿರುವುಗಳಿಂದ ಕೂಡಿದ್ದು, ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದರೂ ರಸ್ತೆ ದುರಸ್ತಿಯಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)