ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಸ್ಥಿತಿಯಲ್ಲಿ ವೃದ್ಧೆಗೆ ರಕ್ತದಾನ

Last Updated 27 ಮಾರ್ಚ್ 2020, 14:18 IST
ಅಕ್ಷರ ಗಾತ್ರ

ಕಾರವಾರ:ಜಿಲ್ಲಾ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ವೃದ್ಧೆಯೊಬ್ಬರಿಗೆ ‘ಎ.ಬಿ ನೆಗೆಟಿವ್’ ಗುಂಪಿನ ರಕ್ತವನ್ನುನಂದನಗದ್ದಾದ ಗಿಂಡಿವಾಡಾದ ವಿಘ್ನೇಶ್ವರ ಕುರ್ಡೇಕರ್ (42) ಶುಕ್ರವಾರ ಸಕಾಲಕ್ಕೆ ದಾನ ಮಾಡಿದ್ದಾರೆ.

71 ವರ್ಷದ ವೃದ್ಧೆಯ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವು ಶೇ 3.1ರಷ್ಟಿದ್ದು ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಆದ್ದರಿಂದ ಅವರಿಗೆ ತುರ್ತಾಗಿ ರಕ್ತ ಒದಗಿಸಬೇಕಿತ್ತು. ಅವರ ಸಂಬಂಧಿಗಳು ರೆಡ್‌ಕ್ರಾಸ್ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರನ್ನು ಸಂಪರ್ಕಿಸಿದ್ದರು. ಅವರು ಕೂಡಲೇಚೆಂಡಿಯಾದ ವಿನಾಯಕ ನಾಯ್ಕ ಅವರನ್ನು ಸಂಪರ್ಕಿಸಿ, ವಿಘ್ನೇಶ್ವರ ಅವರ ಮೊಬೈಲ್ ಸಂಖ್ಯೆ ಪಡೆದುಕೊಂಡು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿ ರಕ್ತದಾನ ಮಾಡಿದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೊಲೀಸರಿಗೆ ಪರಿಸ್ಥಿತಿಯ ಮನವರಿಕೆ ಮಾಡಿ ರಕ್ತದಾನಿಯನ್ನು ಕರೆದುಕೊಂಡು ಹೋಗಲಾಯಿತು. ಈ ಸಂದರ್ಭದಲ್ಲಿಡಾ.ರಿಜ್ವಾನಾ, ಡಾ.ನದೀಮ್, ಶುಶ್ರೂಷಕಿ ಖುರ್ಷಿದಾ, ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT