ಶಿರಸಿ: ಮರಳಿ ಪುಸ್ತಕದೆಡೆಗೆ ಅಭಿಯಾನ ಆರಂಭಿಸಿದರೆ ಮೂಲೆಗುಂಪಾದ ಪುಸ್ತಕಗಳು ತೆರೆಗೆ ಬರುತ್ತವೆ. ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳನ್ನು ಕಾಣಬಹುದು ಎಂದು ಹಿರಿಯ ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಹೇಳಿದರು.

ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬರಹಗಾರ್ತಿ ಎನ್.ಆರ್. ರೂಪಶ್ರೀ ಅವರ ‘ನಿನ್ನ ಪ್ರೀತಿಯ ನೆರಳಿನಲ್ಲಿ‘ ಸಣ್ಣ ಕಥೆಗಳ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮೊಬೈಲ್, ಟಿ.ವಿ ಪುಸ್ತಕದ ಓದನ್ನು ಹಾಳು ಮಾಡಿರುವ ಜತೆಗೆ ಮಾನವೀಯ ಸಂಬಂಧವನ್ನು ಹದಗೆಡಿಸಿವೆ. ಮೊಬೈಲ್ ಗೀಳು ಬಿಟ್ಟು ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು. ಇದಕ್ಕೆ ಗೋ ಬ್ಯಾಕ್ ಟು ಬುಕ್ ಅಭಿಯಾನ ಸಹಕಾರಿಯಾಗಿದೆ ಎಂದರು.

ಸಾಹಿತ್ಯದ ಬಗ್ಗೆ ಇರುವ ಮಡಿವಂತಿಕೆ ಬಿಡಬೇಕು. ಸಾಹಿತ್ಯದ ವೇದಿಕೆಯಲ್ಲಿ ಎಲ್ಲ ರೀತಿಯ ಚರ್ಚೆಗಳು ನಡೆದು, ಸಮಾಜದ ಹೊಲಸು ಗುಡಿಸುವ ಕಾರ್ಯ ಆಗಬೇಕು ಎಂದು ಹೇಳಿದರು. ಪತ್ರಕರ್ತರಾದ ಕೆ. ಗಣೇಶ ಕೊಡೂರು, ಅಶೋಕ ಹಾಸ್ಯಗಾರ, ಸಾಹಿತಿ ಭಾಗೀರಥಿ ಹೆಗಡೆ ಮಾತನಾಡಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಜಯರಾಮ ಹೆಗಡೆ, ಸುಬ್ರಾಯ ಮತ್ತಿಹಳ್ಳಿ, ರಾಜು ಹೆಗಡೆ, ಸಿಂಧು ಹೆಗಡೆ,ಗಾಯತ್ರಿ ರಾಘವೇಂದ್ರ, ಡಾ. ಅಜಿತ್ ಹರೀಶಿ, ನಾಗಪತಿ ಮತ್ತಿಘಟ್ಟ, ಗಣೇಶ ಹೊಸ್ಮನೆ ಕವನ ವಾಚಿಸಿದರು. ಶೃತಿ ಭೋಡೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.