ಜೊಯಿಡಾ: ತಾಲ್ಲೂಕಿನ ಗಣೇಶಗುಡಿಯಲ್ಲಿ ಸೇತುವೆಯ ಮೇಲೆ ಸೋಮವಾರ ಮೊಬೈಲ್ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಕಾಳಿ ನದಿಗೆ ಬಿದ್ದ ಪ್ರೇಮಿಗಳ ಮೃತದೇಹಗಳು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.

ಸೋಮವಾರ ಸಂಜೆಯಿಂದಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಯುವಕ ಯುವತಿಯ ಹುಡುಕಾಟ ಮದಲ್ಲಿ ನಿರತರಾಗಿದ್ದರು. ಮಂಗಳವಾರ ಗಣೇಶಗುಡಿಯ ಫ್ಲೈ ಕ್ಯಾಚರ್ ರೆಸಾರ್ಟ್ ಸಿಬ್ಬಂದಿ ಸಹಕಾರದಿಂದ ಇಬ್ಬರ ಮೃತದೇಹಗಳನ್ನು ನೀರಿನಿಂದ ಮೇಲಕ್ಕೆ ತರಲಾಯಿತು.

ಯುವತಿಯನ್ನು ಬೀದರ್‌ನ ರಕ್ಷಿತಾ ಎಂದು ಗುರುತಿಸಲಾಗಿದೆ. ಅವರು ಕಲಬುರ್ಗಿಯಲ್ಲಿಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದರು. ಯುವಕ ಕೂಡ ಬೀದರ್‌ನವರಾಗಿದ್ದು, ಪರುಷೋತ್ತಮ ಪಾಟೀಲ ಎಂದು ಗುರುತಿಸಲಾಗಿದೆ. ಅವರು ಬೀದರ್‌ನ ಕರ್ನಾಟಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ:‘ಸೆಲ್ಫಿ’ ತೆಗೆದುಕೊಳ್ಳುವಾಗ ‘ಕಾಳಿ’ಗೆ ಬಿದ್ದ ಯುವಕ, ಯುವತಿ

ಸ್ಥಳಕ್ಕೆ ಯುವತಿಯ ಕುಟುಂಬದವರು ಬಂದಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿದೆ.ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರವೇ ಇದು ಸಹಜ ಸಾವೇ ಅಥವಾ ಆತ್ಮಹತ್ಯೆಯೇ ಎಂದು ತಿಳಿದು ಬರಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.