ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರು: ದರ ಇಳಿಕೆ

ಬ್ಯಾಡಗಿ ಮೆಣಸು ತುಟ್ಟಿ: ಕೆ.ಜಿ.ಗೆ ₹ 240
Last Updated 30 ಜನವರಿ 2020, 20:12 IST
ಅಕ್ಷರ ಗಾತ್ರ

ಕಾರವಾರ: ನಗರದ ಮೀನು ಮಾರುಕಟ್ಟೆಯಲ್ಲಿ ಈ ವಾರ ಮೀನು ಮಾರಾಟ ಭರದಿಂದ ಸಾಗಿದೆ. ಎರಡು ವಾರ ಮೀನಿಲ್ಲದೇ ಪರಿತಪಿಸಿದ ಗ್ರಾಹಕರಲ್ಲಿ ಈಗ ಸಂತಸ ಮೂಡಿದೆ.

ಮೀನುಗಳ ದರದಲ್ಲಿಯೂ ಅಲ್ಪ ಪ್ರಮಾಣದ ಇಳಿಕೆ ಕಂಡಿದ್ದು ದೊಡ್ಡ ಗಾತ್ರದ ಬಂಗಡೆ₹ 200ಕ್ಕೆ ನಾಲ್ಕರಿಂದ ಐದು ಸಿಗುತ್ತಿವೆ. ಸಣ್ಣದು ಆರರಿಂದ ಏಳರವರೆಗೂ ಸಿಗುತ್ತಿದೆ. ಮೂರು ವಾರಗಳ ಹಿಂದೆ₹ 1,200ರಲ್ಲಿ ಮಾರಾಟವಾಗುತ್ತಿದ್ದ ಕಿಂಗ್‌ಫಿಶ್ ಸದ್ಯ₹ 800ರಿಂದ 900ರಲ್ಲಿ ಸಿಗುತ್ತಿದೆ. ಪಾಂಫ್ರೆಟ್ ಒಂದಕ್ಕೆ₹ 400ರಿಂದ₹ 500 ಇದೆ. ಅಂದರೆ ದರದಲ್ಲಿ ₹ 300ಗಳಷ್ಟು ಇಳಿಕೆಯಾಗಿದೆ.

ಮೊಟ್ಟೆಗೆ ಸಗಟು ಮಾರುಕಟ್ಟೆಯಲ್ಲಿ ಡಜನ್‌ಗೆ ₹ 56 ದರವಿದೆ. ಫಾರಂ ಕೋಳಿಯ ದರ ₹ 200ರಿಂದ₹180ಕ್ಕೆ ಇಳಿದಿದೆ. ಮಟನ್ ಪ್ರತಿ ಕೆ.ಜಿ.ಗೆ₹ 600 ಹಾಗೂ ಚಿಕನ್ ₹ 20ರಲ್ಲಿಸ್ಥಿರವಾಗಿದೆ.

ದಿನಸಿಯಲ್ಲಿ ಬ್ಯಾಡಗಿ ಮೆಣಸಿನ ದರ ಮತ್ತೆ ಏರಿಕೆ ಕಂಡಿದೆ. ಎರಡು ವಾರದ ಹಿಂದೆ₹ 250ರಿಂದ₹ 220ಕ್ಕೆ ಇಳಿದಿತ್ತು. ಈಗ₹ 240ಕ್ಕೆ ಏರಿಕೆಯಾಗಿದೆ. ಸ್ವಸ್ತಿಕ್ ಅಕ್ಕಿಯ ದರ 25 ಕೆ.ಜಿ.ಯ ಚೀಲಕ್ಕೆ₹ 1,000 ಇದೆ.ಪಾಮ್‌ ಆಯಿಲ್‌ಲೀಟರ್‌ಗೆ ₹ 100ಇದ್ದರೆ ಸೂರ್ಯಕಾಂತಿ ಎಣ್ಣೆ₹ 110ರಲ್ಲಿ ಸಿಗುತ್ತಿದೆ. ಸೂರ್ಯಕಾಂತಿ ಎಣ್ಣೆ ದರದಲ್ಲಿ ಹಿಂದಿನ ವಾರಕ್ಕಿಂತ₹ 10ರಷ್ಟು ಕಡಿಮೆಯಾಗಿದೆ. ಹಸಿರು ಬಟಾಣಿ ಪ್ರತಿ ಕೆ.ಜಿ.ಗೆ₹ 160ರ ದರವಿದೆ.

ಸೇವಂತಿಹೂವು ಮತ್ತು ಕಾಕಡ ಮಲ್ಲಿಗೆಯು ಒಂದು ಮಾರಿಗೆ₹50, ಕನಕಾಂಬರ₹60, ಗೊಂಡೆ ಹೂವು₹40, ಡೇರೆ ಹೂವು₹60ರ ದರ ಹೊಂದಿವೆ. ಹೂವಿನ ಹಾರ ಒಂದಕ್ಕೆ₹60ರಂತೆ ಮಾರಾಟವಾಗುತ್ತಿದೆ.

ಹಣ್ಣಿನ ಮಾರುಕಟ್ಟೆಯಲ್ಲಿ ಸೇಬು ಪ್ರತಿ ಕೆ.ಜಿ.ಗೆ ₹ 100, ₹ 120, ₹ 150ರ ವರೆಗೂ ಇದೆ. ಇರಾನಿ ಸೇಬು ತುಟ್ಟಿಯಾಗಿದ್ದು ₹ 200ರ ದರ ಹೊಂದಿದೆ. ಕಿತ್ತಳೆ₹ 80ರಿಂದ ₹ 90ರವರೆಗಿನ ದರದಲ್ಲಿ ವಹಿವಾಟು ಕಾಣುತ್ತಿದೆ. ಬಿಳಿ ದ್ರಾಕ್ಷಿಗೆ ₹ 160, ಕಪ್ಪು ದ್ರಾಕ್ಷಿಗೆ ₹ 180 ಇದೆ. ಮೂಸಂಬಿಯ ದರ ₹ 80ರಲ್ಲಿ ಸ್ಥಿರವಾಗಿದೆ.

ಈರುಳ್ಳಿ ದರ ಇಳಿಕೆ:ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿಯ ದರದಲ್ಲಿ₹ 10ರಷ್ಟು ಇಳಿಕೆ ಕಂಡಿದೆ. ಗ್ರಾಹಕರಿಗೆ ₹ 60ಕ್ಕೆ ಒಂದು ಕೆ.ಜಿ. ಸಿಗುತ್ತಿತ್ತು. ಈಗ ₹ 50ರಲ್ಲಿ ಕೊಂಡುಕೊಳ್ಳುತ್ತಿದ್ದಾರೆ.

ಟೊಮೆಟೊ ದರ ₹ 10ರಷ್ಟು ಏರಿಕೆಯಾಗಿ ₹ 30ರಲ್ಲಿ ಬಿಕರಿಯಾಗುತ್ತಿದೆ. ಕ್ಯಾರೆಟ್ ದರದಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಹಿಂದಿನ ವಾರ ಪ್ರತಿ ಕೆ.ಜಿ.ಗೆ₹ 80 ಇತ್ತು. ಈಗ₹ 60 ಇದೆ.ಆಲೂಗಡ್ಡೆ ₹40, ಹೂಕೋಸು ₹30, ಬೆಳ್ಳುಳ್ಳಿ ₹200, ಬೀನ್ಸ್ ₹60ರ ದರದಲ್ಲಿಬಿಕರಿಯಾಗುತ್ತಿವೆ.

ಧಾರಣೆ ವಿವರ

ಆಲೂಗಡ್ಡೆ– 40

ಟೊಮೆಟೊ– 30

ಕ್ಯಾರೆಟ್– 60

ಬೀಟ್‌ರೂಟ್– 60

ಕ್ಯಾಪ್ಸಿಕಂ– 60

ಮೆಣಸಿನಕಾಯಿ– 60

ಶುಂಠಿ– 100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT