ಬುಧವಾರ, ಮಾರ್ಚ್ 3, 2021
20 °C
ಸಂರಕ್ಷಿತ ತರಕಾರಿ ಬೇಸಾಯ ಪ್ರಾತ್ಯಕ್ಷಿಕೆ, ಕ್ಷೇತ್ರೋತ್ಸವ

‘ಸಂರಕ್ಷಿತ ಬೇಸಾಯದಿಂದ ಅಧಿಕ ಲಾಭ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ರೈತರು ಏಕಬೆಳೆ ಅವಲಂಬನೆಗಿಂತ ಬಹುಬೆಳೆಯತ್ತ ಆಕರ್ಷಿತರಾಗಿ ಕಾಲ ಕಾಲಕ್ಕೆ ಕೃಷಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಪಾಲಿಹೌಸ್ ತಂತ್ರಜ್ಞಾನ ಅಳವಡಿಕೆಯಿಂದ ಪ್ರಕೃತಿ ವಿಕೋಪದಿಂದ ಪಾರಾಗಬಹುದು ಎಂದು ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ವೈ.ಕೆ.ನಾಟಿಕಲ್ ಅಭಿಪ್ರಾಯಪಟ್ಟರು.

ಶುಕ್ರವಾರ ಇಲ್ಲಿ ಆಯೋಜಿಸಿದ್ದ ಸಂರಕ್ಷಿತ ತರಕಾರಿ ಬೇಸಾಯ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ, ಪ್ರಾತ್ಯಕ್ಷಿಕೆ, ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

ತೋಟಗಾರಿಕಾ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಡಾ.ಎಸ್.ಐ.ಅಥಣಿ ಮಾತನಾಡಿ, ‘ಸಂರಕ್ಷಿತ ತರಕಾರಿ ಬೇಸಾಯ ಕ್ರಮದಲ್ಲಿ ರೈತರು ದ್ವಿಗುಣ ಆದಾಯ ಗಳಿಸಬಹುದು. ಜಿಲ್ಲೆಯಲ್ಲಿ ತಲೆದೋರಿದ ಮಳೆ ಪ್ರವಾಹದಿಂದ ಅನೇಕ ರೈತ ಕುಟುಂಬಗಳು ಕೃಷಿ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಕುಟುಂಬವನ್ನು ನಿಭಾಯಿಸುತ್ತಿರುವುದು ಶೋಚನೀಯ ಸಂಗತಿ. ಅಂತಹ ರೈತರು ಸಂರಕ್ಷಿತ ಬೇಸಾಯ ಪದ್ಧತಿಯನ್ನು ಅನುಸರಿಸಿ ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಬಹುದು’ ಎಂದರು.

ತೋಟಗಾರಿಕಾ ಕಾಲೇಜಿನ ಡೀನ್ ಡಾ.ಎನ್.ಕೆ.ಹೆಗಡೆ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಡಾ.ಬಿ.ಪಿ.ಸತೀಶ, ದೇವರಾಜ ಒಡೆನೂರು ಇದ್ದರು. ಪ್ರಾಧ್ಯಾಪಕರಾದ ಡಾ. ಶಿವಾನಂದ ಹೊಂಗಲ್,  ಡಾ.ಹರ್ಷವರ್ಧನ ಎಂ, ಚಂದನ ಕೆ, ಸುಜಯ್ ಭಟ್ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಡಾ.ಪುಷ್ಪಾ ಪಿ ನಿರೂಪಿಸಿದರು. ಡಾ.ಶಿವಕುಮಾರ್ ಕೆ.ಎಂ ವಂದಿಸಿದರು. ಕ್ಷೇತ್ರೋತ್ಸವದಲ್ಲಿ 90ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.