ಅಕ್ರಮ ಜಾನುವಾರು ಸಾಗಾಟ: ಮೂವರ ಬಂಧನ

ಯಲ್ಲಾಪುರ: ಅಕ್ರಮ ಮತ್ತು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ 22 ಜನುವಾರುಗಳನ್ನು ಯಲ್ಲಾಪುರ ಪೊಲೀಸರು ತಾಲ್ಲೂಕಿನ ಹಳಿಯಾಳ ಕ್ರಾಸ ಬಳಿ ಸೋಮವಾರ ಬೆಳಿಗ್ಗೆ ಲಾರಿ ಸಮೇತವಾಗಿ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಲಾರಿಯ ಚಾಲಕ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಹೈದರ್ ರಮಲ್ಲಾನ್ (39), ಅಬ್ದುಲ್ ರಜಾಕ್ ಅಬ್ದುಲ್ ಅಬೂಬ್ಕರ್ (53) ಉಜಿರೆ ಬೆಳ್ತಂಗಡಿ, ಹಾಗೂ ಲಾರಿ ಮಾಲಕ ಬೆಂಗಳೂರಿನ ಚಾಮರಾಜ ಪೇಟೆಯ ಅಬೂಬ್ಕರ್ ದಿಲ್ಶಾದ್ ಅಬ್ದುಲ್ ಹಮೀದ್ ಎಸ್.ಎ.(32) ಬಂಧಿತರು. ಇನ್ನಿಬ್ಬರು ಆರೋಪಿಗಳು ಪರಾಗಿಯಾಗಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಮಂಗಳೂರಿಗೆ ಎರಡು ಎಮ್ಮೆ ಹಾಗೂ 20 ಕೋಣಗಳನ್ನು ಹಿಂಸಾತ್ಮಕವಾಗಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ವಶಪಡಿಸಿಕೊಂಡ ಜಾನುವಾರು ಹಾಗೂ ವಾಹನದ ಮೌಲ್ಯ ₹ 14,60 ಲಕ್ಷ ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.