ಸೋಮವಾರ, ಆಗಸ್ಟ್ 15, 2022
23 °C

ಪಾಕಿಸ್ತಾನಿ ಮಹಿಳೆಯ ತನಿಖೆ ಪೂರ್ಣಗೊಳಿಸಿದ ಕೇಂದ್ರ ತನಿಖಾ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ಅನಧಿಕೃತವಾಗಿ ಆರು ವರ್ಷಗಳಿಂದ ಭಟ್ಕಳದಲ್ಲಿ ವಾಸವಿದ್ದ ಪಾಕಿಸ್ತಾನಿ ಮಹಿಳೆಯನ್ನು ಬಂಧಿಸಿದ್ದ ಕೇಂದ್ರ ತನಿಖಾ ತಂಡ ಮತ್ತು ಬೆಂಗಳೂರಿನ ಎ.ಟಿ.ಎಸ್ ಬುಧವಾರ ತನಿಖೆ ಪೂರ್ಣಗೊಳಿಸಿವೆ.

ಖತೀಜಾ ಮೆಹರಿನ್ ಎನ್ನುವ ಪಾಕಿಸ್ತಾನದ ರಾಷ್ಟ್ರೀಯತೆ ಹೊಂದಿರುವ ಮಹಿಳೆಯು ಭಟ್ಕಳ ತಾಲ್ಲೂಕಿನ ನವಾಯತ ಕಾಲೊನಿಯ ಮನೆಯೊಂದರಲ್ಲಿ ಅಕ್ರಮವಾಗಿ ವಾಸವಿದ್ದರು. ಈ ಬಗ್ಗೆ ಗುಪ್ತಚರ ಮಾಹಿತಿಯನ್ನು ಆಧರಿಸಿ ಭಟ್ಕಳ ನಗರ ಠಾಣಾ ಪೊಲೀಸರು  ಜೂನ್ 9ರಂದು ಬಂಧಿಸಿದ್ದರು.

ಕೇಂದ್ರದ ತನಿಖಾ ತಂಡ ಮತ್ತು ಬೆಂಗಳೂರಿನ ಎ.ಟಿ.ಎಸ್ ತಂಡದವರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಭಟ್ಕಳ ಮತ್ತು ಕಾರವಾರದಲ್ಲೂ ತನಿಖೆ ನಡೆಸಲಾಗಿದ್ದು, ಪ್ರಮುಖ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಈ ಮಹಿಳೆಯು, ಎಂಟು ವರ್ಷಗಳ ಹಿಂದೆ ಭಟ್ಕಳದ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್ ಎಂಬುವವರನ್ನು ದುಬೈನಲ್ಲಿ ವಿವಾಹವಾಗಿದ್ದರು. 2014ರಲ್ಲಿ ಮೂರು ತಿಂಗಳ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದರು. ಬಳಿಕ ವಾಪಸಾಗಿ 2015ರ ಆರಂಭದಲ್ಲಿ ಕಳ್ಳ ಮಾರ್ಗದಲ್ಲಿ ದೇಶಕ್ಕೆ ನುಸುಳಿ ಭಟ್ಕಳದಲ್ಲಿರುವ ಗಂಡನ ಮನೆಯಲ್ಲಿ ವಾಸವಿದ್ದರು. ಅವರಿಗೆ ಮೂವರು ಮಕ್ಕಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು