ಶನಿವಾರ, ಜೂನ್ 25, 2022
24 °C
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್

ಮಿಲಿಟರಿ ಇರುವಾಗ ಆರ್‌ಎಸ್‌ಎಸ್‌ ದೇಶ ಕಾಯಬೇಕೆ? –ಬಿ.ಕೆ.ಹರಿಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಮಟಾ (ಉತ್ತರ ಕನ್ನಡ): ‘ಮಿಲಿಟರಿ ಪಡೆ ಇರುವಾಗ ಖಾಕಿ ಚೆಡ್ಡಿ, ಕರಿ ಟೋಪಿ, ಕೈಯಲ್ಲಿ ದೊಣ್ಣೆ ಹಿಡಿದವರು ದೇಶ ಕಾಯುವ ಅಗತ್ಯವಿದೆಯೇ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರು

ಜಿಲ್ಲೆಯ ಬಿ.ಕೆ.ಹರಿಪ್ರಸಾದ್ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ಕುಮಟಾದಲ್ಲಿ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಗಾಂಧಿ ಕೊಂದ ಸಂಘ ಪರಿವಾರದವರಿಗೆ ಅವರ ಆದರ್ಶವನ್ನು ಕೊಲ್ಲಲು ಮಾತ್ರ ಸಾಧ್ಯವಾಗಿಲ್ಲ’ ಎಂದು ಟೀಕಿಸಿದರು.

‘ಈ ದೇಶದಲ್ಲಿ ಉಳುವವನೇ ಹೊಲದೊಡೆಯ ಯೋಜನೆಯ ಲಾಭ ಪಡೆದವರು ದೇಶಭಕ್ತರಾಗಲು ಹೊರಟಿರುವುದು ವಿಷಾದಕರ. ಅವರ ಹಿಂದೆ ಇರುವವರು ಅವರ ಕೈಗೆ ಆಯುಧ ಕೊಟ್ಟು ತಮ್ಮ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು