ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡವೆಂದರೂ ಕಾಂಗ್ರೆಸ್‌ನವರಿಂದ ದಿನಕ್ಕೊಂದು ಸಮಸ್ಯೆ ಸೃಷ್ಟಿ: ಆರ್. ಅಶೋಕ್

Last Updated 15 ಏಪ್ರಿಲ್ 2022, 10:05 IST
ಅಕ್ಷರ ಗಾತ್ರ

ಅಚವೆ (ಕಾರವಾರ): 'ಬೇಡ ಎಂದರೂ ಕಾಂಗ್ರೆಸ್‌ನವರು ದಿನಕ್ಕೊಂದು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದರು ಎಂದು ಹೇಳಲು ಸಿದ್ಧರಿಲ್ಲ. 50 ವರ್ಷ ದೇಶವನ್ನು ಆಳುವ ಅವಕಾಶ ಯಾವ ಪಕ್ಷಕ್ಕೂ ಸಿಕ್ಕಿಲ್ಲ. ಆದರೆ, ಅವರು ಗರೀಬಿ ಹಠಾವೋ ಘೋಷಣೆ ಬಿಟ್ಟರೆ ಮತ್ತೇನೂ ಮಾಡಿಲ್ಲ. ಬಡವರನ್ನು ತುಳಿದಿದ್ದಾರೆ' ಎಂದು ಕಂದಾಯ ಸಚಿವ ಆರ್. ಅಶೋಕ್ ಟೀಕಿಸಿದರು.

ಅಂಕೋಲಾ ತಾಲ್ಲೂಕಿನ ಅಚವೆ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ 'ಕಂದಾಯ ಸಚಿವರ ಗ್ರಾಮ ವಾಸ್ತವ್ಯ' ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

'ಚುನಾವಣೆ ಹತ್ತಿರವಾಗುತ್ತಿದೆ. ಹಾಗಾಗಿ ಪ್ರತಿದಿನ ಯಾವುದಾದರೂ ವಿಷಯವನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಆಪಾದನೆ ಮಾಡುವುದು ಅವರಿಗೆ ಪರಿಪಾಠವಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ನೂ ಜಾಸ್ತಿಯಾಗುತ್ತದೆ. ಕಾಂಗ‌್ರೆಸ್‌ನ ನಡೆ ಆಪಾದನೆಗಳ ಕಡೆ ಎಂಬಂತಾಗಿದೆ. ಅಧಿಕಾರದಲ್ಲಿದ್ದಾಗ ನೀವೇನು ಮಾಡಿದ್ದೀರಿ ಎಂದು ಕೇಳಿದರೆ, ನಾವು ತಪ್ಪು ಮಾಡಿದ್ದೇವೆ ಬಿಡ್ರಿ. ನೀವು ಒಳ್ಳೆಯ ಕೆಲಸ ಮಾಡಿ ಎಂದು ವಿಧಾನಸಭೆ ಕಲಾಪದಲ್ಲೇ ನಮಗೆ ಉಪದೇಶ ಮಾಡುತ್ತಾರೆ' ಎಂದರು.

'ಈಶ್ವರಪ್ಪ ಪ್ರಕರಣವೂ ಕಾಂಗ್ರೆಸ್‌ನವರ ಆಪಾದನೆಯೇ' ಎಂದು ಪ್ರಶ್ನಿಸಿದಾಗ, 'ಕಾನೂನಿದೆ. ಅದರ ಅಡಿಯಲ್ಲಿ ಎಲ್ಲರೂ ಸಮಾನರು. ನಮಗೊಂದು, ಬೇರೆಯವರಿಗೊಂದು ಇಲ್ಲ. ಅದರ ಪ್ರಕಾರವೇ ಕ್ರಮವಾಗುತ್ತದೆ' ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT