ಭಾನುವಾರ, ಫೆಬ್ರವರಿ 23, 2020
19 °C

ನಾಯಿಮರಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಕುಮಟಾದ ಕಡ್ಲೆ ಗಾಂಧಿವನ ಕ್ರೀಡಾಂಗಣದಲ್ಲಿ ಯುವಕನೊಬ್ಬ ಬೀದಿ ನಾಯಿಮರಿಗೆ ಮದ್ಯ ಕುಡಿಸಿ ವಿಕೃತಿ ಮೆರೆದಿದ್ದಾನೆ. ಗಾಳಿ ಮರದ ಕೆಳಗೆ, ಹಾಡಹಗಲೇ ಮದ್ಯದ ಬಾಟಲಿ ತೆರೆದ ಆತ, ನಾಯಿ ಮರಿಯನ್ನು ಹಿಡಿದು ಅದರ ಬಾಯಿಗೆ ಮದ್ಯ ಸುರಿದಿದ್ದಾನೆ.

ಸಮೀಪದಲ್ಲಿದ್ದ ಮತ್ತೊಬ್ಬ ಅದನ್ನು ವಿಡಿಯೊ ಮಾಡಿದ್ದಾನೆ. ಈ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆತ ಯಾರು, ಎಲ್ಲಿಯವನು, ಯಾವಾಗ ಈ ರೀತಿ ಮಾಡಿದ್ದು ಎಂದು ಗೊತ್ತಾಗಿಲ್ಲ. ನಾಯಿ ಮರಿಯನ್ನು ಹಿಡಿದ ಆತ, ‘ನೀನು ಕೂತ್ಕೊಳ್ಳೆ, ಲಾಸ್ಟ್ ಪೆಗ್ ಐತಷ್ಟೇ...’ ಎನ್ನುತ್ತಾ ಮದ್ಯ ಕುಡಿಸಿದ್ದಾನೆ. ನಂತರ ಅದು ಕಷ್ಟಪಡುತ್ತಾ ಹೋಗಿ ಮರದ ಕೆಳಗೆ ಮಲಗಿದ್ದನ್ನು ಕಂಡು ಸಂಭ್ರಮಿಸಿದ್ದಾನೆ.

ವಿಡಿಯೊ ನೋಡಿದ ಹಲವರು ಈ ಅಮಾನವೀಯ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)