ಶಿರಸಿ: ಹಸಿವಿನಿಂದ ಬಳಲಿ ಸಾಯುವ ಸ್ಥಿತಿ ತಲುಪಿದ್ದ ಮೂರು ಕತ್ತೆಗಳನ್ನು ಹರಿಹರದಿಂದ ತಂದು ಇಲ್ಲಿನ ಅಮೇಜಿಂಗ್ ಪೆಟ್ ಪ್ಲಾನೆಟ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಕತ್ತೆಗಳು ಈಗ ಚೇತರಿಸಿಕೊಳ್ಳುತ್ತಿವೆ.

ಅನಾಥ ಪ್ರಾಣಿ, ಪಕ್ಷಿಗಳ ಅನಾಥಾಶ್ರಮವಾದ ಅಮೇಜಿಂಗ್ ಪೆಟ್ ಪ್ಲಾನೆಟ್‌ನ ಮುಖ್ಯಸ್ಥ ರಾಜೇಂದ್ರ ಶಿರಸಿಕರ್ ಅವರು ಕತ್ತೆಗಳಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ‘ವ್ಯಕ್ತಿಯೊಬ್ಬ ಈ ಮೂರು ಕತ್ತೆಗಳನ್ನು ಬೇಕಾಬಿಟ್ಟಿ ದುಡಿಸಿಕೊಂಡು, ಅದು ನಿಶ್ಶಕ್ತಗೊಂಡ ಮೇಲೆ ರಸ್ತೆಯಲ್ಲಿ ಬಿಟ್ಟು ಹೋಗಿದ್ದ. ಮೈತುಂಬ ಗಾಯಗಳಾಗಿದ್ದ ಕತ್ತೆಗಳು ಹಸಿವಿನಿಂದ ನಿತ್ರಾಣಗೊಂಡಿದ್ದವು. ದಾರಿಹೋಕರೊಬ್ಬರು ಈ ಕತ್ತೆಗಳ ದಾರುಣ ಸ್ಥಿತಿಯ ಬಗ್ಗೆ ತಿಳಿಸಿದರು’ ಎನ್ನುತ್ತಾರೆ ಪ್ಲಾನೆಟ್ ನಡೆಸುತ್ತಿರುವ ಪದ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಸೂರಜ್ ಶಿರಸಿಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.