ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಕ್ರಜ್ಜಿ ಆರೋಗ್ಯದಲ್ಲಿ ಚೇತರಿಕೆ: ಮನೆಯಲ್ಲೇ ಚಿಕಿತ್ಸೆ

Last Updated 4 ನವೆಂಬರ್ 2021, 13:31 IST
ಅಕ್ಷರ ಗಾತ್ರ

ಅಂಕೋಲಾ: ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ಚಿಕಿತ್ಸೆ ಪಡೆಯುತ್ತಿದ್ದ ಜಾನಪದ ಗಾಯಕಿ ಸುಕ್ರಿ ಗೌಡ ಅವರ ಒತ್ತಾಯದ ಮೇರೆಗೆ, ಅಂಕೋಲಾದ ಬಡಗೇರಿಯ ಅವರ ಮನೆಗೆ ಗುರುವಾರ ಕರೆದುಕೊಂಡು ಬರಲಾಗಿದೆ. ಅವರಿಗೆ ಮನೆಯಲ್ಲಿಯೇ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ.

ದೀಪಾವಳಿ ಹಬ್ಬಕ್ಕೆ ಮನೆಗೆ ಹೋಗಲು ಅವಕಾಶ ಕೊಡುವಂತೆ ಅವರು ವೈದ್ಯರಿಗೆ ಒತ್ತಾಯಿಸಿದ್ದರು. ಉಸಿರಾಟದ ಸಮಸ್ಯೆಯ ಚಿಕಿತ್ಸೆಗೆಂದು ಅವರನ್ನು ಅ.27ರಂದು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ತುಸು ಚೇತರಿಕೆ ಕಾಣಿಸಿದ್ದರಿಂದ ಅವರನ್ನು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ‘ಕ್ರಿಮ್ಸ್’ ನಿರ್ದೇಶಕ ಡಾ.ಗಜಾನನ ನಾಯಕ ಹಾಗೂ ಇತರ ವೈದ್ಯರ ನೆರವಿನೊಂದಿಗೆ ಮನೆಗೆ ಕರೆದುಕೊಂಡು ಬರಲಾಯಿತು.

ಮಾಹಿತಿ ನೀಡಿದ ಡಾ.ಗಜಾನನ ನಾಯಕ, ‘ಸುಕ್ರಿ ಗೌಡ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಆದರೂ ಉಸಿರಾಟದ ಸಮಸ್ಯೆಗೆ ದಿನದಲ್ಲಿ 16ರಿಂದ 18 ಗಂಟೆ ಆಮ್ಲಜನಕ ನೀಡಬೇಕಿದೆ. ಅವರ ಇಚ್ಛೆಯಂತೆ ಮನೆಗೆ ಕರೆದುಕೊಂಡು ಬರಲಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡರೆ ಆಮ್ಲಜನಕ ನೀಡಲು ಕಷ್ಟವಾಗಬಹುದು. ಹೆಸ್ಕಾಂ ಅಧಿಕಾರಿಗಳಿಗೆ ಈ ಭಾಗದಲ್ಲಿ ವಿದ್ಯುತ್ ಕಡಿತಗೊಳಿಸದಂತೆ ತಿಳಿಸಲಾಗಿದೆ. ಅಲ್ಲದೇ ಅಗತ್ಯ ಸಂದರ್ಭಗಳಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಕುಟುಂಬದವರಿಗೆ ಸೂಚಿಸಲಾಗಿದೆ’ ಎಂದರು.

‘ಹಬ್ಬದ ಆಚರಣೆಗೆ ಮನೆಗೆ ಬರುವ ಆಸೆಯಾಗಿತ್ತು. ಎಲ್ಲರೂ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ’ ಎಂದು ಸುಕ್ರಿ ಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT