ಶನಿವಾರ, ಜನವರಿ 25, 2020
22 °C

ಕಾಡೆಮ್ಮೆ ಪ್ರಕರಣ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕಾಡುಪ್ರಾಣಿ ಹಾವಳಿ ನಿಯಂತ್ರಿಸಲು ಕೃಷಿ ಭೂಮಿಯಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ತಗುಲಿ ಮೃತಪಟ್ಟ ಕಾಡೆಮ್ಮೆಯನ್ನು ಯಾರಿಗೂ ತಿಳಿಯದಂತೆ ಗುಂಡಿಯಲ್ಲಿ ಮುಚ್ಚಿರುವ ಆರೋಪದ ಮೇಲೆ ಹೆಗ್ಗರಣಿ ಹೊಸ್ತೋಟದ ಐವರನ್ನು ಜಾನ್ಮನೆ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಹೊಸ್ತೋಟದ ಕೃಷ್ಣಮೂರ್ತಿ ಜೋಶಿ, ಕೂಲಿ ಕಾರ್ಮಿಕರಾದ ತಲಗಾರಿನ ಪುಟ್ಟ ಗೌಡ, ಮಹೇಶ ಗೌಡ, ಅತ್ತಿಸವಲು ಗೋವಿಂದ ಗೌಡ ಹಾಗೂ ಈಶ್ವರ ಗೌಡ ಬಂಧಿತರು. ಗುಂಡಿ ತೆಗೆಯಲು ಬಳಸಿದ್ದ ಸಾಮಗ್ರಿ, ಕಾಡೆಮ್ಮೆಯ ಎರಡು ಕೊಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ: ಕೃಷ್ಣಮೂರ್ತಿ ಜೋಶಿ ಅವರ ಗದ್ದೆಯ ತುದಿಯಲ್ಲಿ ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ವಿದ್ಯುತ್ ತಂತಿ ಹಾಕಲಾಗಿತ್ತು. ವಿದ್ಯುತ್ ಪ್ರವಹಿಸುತ್ತಿದ್ದ ಬೇಲಿ ತಗುಲಿ ಕಾಡೆಮ್ಮೆಯೊಂದು ನವೆಂಬರ್ 30ರಂದು ಮೃತಪಟ್ಟಿತ್ತು. ಜೋಶಿಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡದೆ ನಾಲ್ವರು ಕೆಲಸಗಾರರ ಸಹಾಯದೊಂದಿಗೆ, ಆಳದ ಗುಂಡಿ ತೆಗೆದು, ಅದಲ್ಲಿ ಸತ್ತ ಕಾಡೆಮ್ಮೆಯನ್ನು ಹುಗಿದಿದ್ದರು. ಘಟನೆಯ ಜಾಡು ಹಿಡಿದ ಡಿಎಫ್ಓ ಎಸ್.ಜಿ.ಹೆಗಡೆ, ಎಸಿಎಫ್ ಅಜಯ್ ಅವರು ವಲಯ ಅರಣ್ಯಾಧಿಕಾರಿ ಪವಿತ್ರಾ, ಎಂ.ಎಚ್.ನಾಯ್ಕ ಮೂಲಕ ತನಿಖೆಗೆ ಇಳಿದು ಅಂತಿಮವಾಗಿ ಪ್ರಕರಣ ಬೇಧಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು