ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಎರಡು ವರ್ಷದ ಬಳಿಕ ‘ದೊಡ್ಡ ಗಣಪ’ನ ದರ್ಶನ

ಅದ್ದೂರಿ ಆಚರಣೆಗೆ ಅಣಿಯಾಗುತ್ತಿರುವ ಗಣೇಶೋತ್ಸವ ಸಮಿತಿಗಳು
Last Updated 13 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಶಿರಸಿ: ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಕಳೆಗಟ್ಟಿದ್ದ ಸಾರ್ವಜನಿಕ ಗಣೇಶೋತ್ಸವ ಆಚರಣೆ ಈ ಬಾರಿ ಕಳೆಗಟ್ಟುವ ಲಕ್ಷಣ ಗೋಚರಿಸಿದೆ. ಇದಕ್ಕಾಗಿಉತ್ಸವಆಯೋಜಿಸುವಸಮಿತಿಗಳುಭರದತಯಾರಿಯಲ್ಲಿತೊಡಗಿಕೊಂಡಿವೆ.

ಕಳೆದ ಎರಡು ವರ್ಷಗಳಿಂದ ಉತ್ಸವಕ್ಕೆ ವಿಧಿಸಿದ್ದ ನಿರ್ಬಂಧಗಳು ಈ ಬಾರಿ ಇಲ್ಲದ ಕಾರಣ ಹಬ್ಬದ ಸಂಭ್ರಮ ಇಮ್ಮಡಿಸುವ ಸಾಧ್ಯತೆ ಇದೆ. ಹಿಂದಿನ ಎರಡು ಗಣೇಶ ಚತುರ್ಥಿ ಹಬ್ಬಗಳಲ್ಲೂ ಸಾರ್ವಜನಿಕವಾಗಿ ಪೂಜಿಸಲ್ಪಡುವ ಗಣೇಶಮೂರ್ತಿ ಎರಡು ಅಡಿ ಮೀರಿರಬಾರದು ಎಂಬ ನಿಯಮ ಹೇರಲಾಗಿತ್ತು. ಹೀಗಾಗಿ ದೊಡ್ಡ ಮೂರ್ತಿಗಳು ಕಾಣದಂತಾಗಿತ್ತು.

ಈಗ ಪುನಃ ಎಲ್ಲೆಡೆ ಸಾರ್ವಜನಿಕ ಉತ್ಸವಕ್ಕಾಗಿ ದೊಡ್ಡ ಗಾತ್ರದ ಮೂರ್ತಿಗಳು ಸಿದ್ಧಗೊಳ್ಳತೊಡಗಿವೆ. ತಾಲ್ಲೂಕಿನಲ್ಲಿ ಸುಮಾರು 48ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಉತ್ಸವ ಆಯೋಜನೆಗೊಳ್ಳುತ್ತಿದ್ದು ಅಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ಕಲಾವಿದರು ನಿರ್ಮಿಸುತ್ತಿದ್ದಾರೆ.

ಜತೆಗೆ ಗಣೇಶೋತ್ಸವ ಮಂಟಪಕ್ಕೆ ಭರದಿಂದ ತಯಾರಿ ನಡೆಯುತ್ತಿದ್ದು, ಎರಡು ವರ್ಷದ ಬಳಿಕ ಉತ್ಸವ ಅದ್ಧೂರಿಯಾಗಿಸಲು ಸಮಿತಿಗಳು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಆಕರ್ಷಕ ರೂಪಕ, ಕಲಾಕೃತಿಗಳ ಸ್ಥಾಪನೆ, ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆಗೂ ತಯಾರಿ ಮಾಡಿಕೊಂಡಿವೆ. ದೇವಿಕೆರೆ, ಮರಾಠಿಕೊಪ್ಪ, ಶಿವಾಜಿಚೌಕ, ಹನುಮಗಿರಿ ಸೇರಿದಂತೆ ಹಲವು ಕಡೆಗಳಲ್ಲಿ ಈಗಾಗಲೇ ಹಬ್ಬದ ವಾತಾವರಣ ಕಳೆಗಟ್ಟುವ ತಯಾರಿ ನಡೆದಿದೆ.

‘ಕೋವಿಡ್ ಕಾರಣದಿಂದ ಎರಡು ವರ್ಷದಿಂದ ಸಂಭ್ರಮಿಸಲು ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಉತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಣಯಿಸಲಾಗಿದೆ’ ಎನ್ನುತ್ತಾರೆ ದೇವಿಕೆರೆ ಗಣೇಶೋತ್ಸವ ಸಮಿತಿಯ ರಾಜೇಶ ಶೆಟ್ಟಿ.

‘ನಿರ್ಬಂಧಗಳಿಂದಾಗಿ ಕಳೆದ ಎರಡು ಹಬ್ಬಗಳಲ್ಲಿ ಸಣ್ಣ ಮೂರ್ತಿಗಳಿಗೆ ಮಾತ್ರ ಬೇಡಿಕೆ ಇಡಲಾಗುತ್ತಿತ್ತು. ದೊಡ್ಡ ಗಾತ್ರದ ಮೂರ್ತಿಗಳಿಗೆ ಈ ಬಾರಿ ಪುನಃ ಬೇಡಿಕೆ ಬಂದಿದೆ. ಇವುಗಳನ್ನು ಸಿದ್ಧಪಡಿಸಲು ದೀರ್ಘ ಕಾಲದ ಅಗತ್ಯವಿರುವ ಕಾರಣ ಒಂದು ತಿಂಗಳ ಹಿಂದಿನಿಂದಲೇ ಸಿದ್ಧತೆ ಕೈಗೊಂಡಿದ್ದೇವೆ’ ಎನ್ನುತ್ತಾರೆ ಸಾರ್ವಜನಿಕ ಗಣೇಶೋತ್ಸವಕ್ಕೆ ಮೂರ್ತಿ ಸಿದ್ಧಪಡಿಸುವ ಕಲಾವಿದ ಮರಾಠಿಕೊಪ್ಪದ ಗಿರೀಶ್ ಗುಡಿಗಾರ.

**

ಸಾರ್ವಜನಿಕ ಗಣೇಶೋತ್ಸವ ದೊಡ್ಡ ಗಾತ್ರದ ಮೂರ್ತಿಗಳಿಂದ ಶೋಭೆ ಪಡೆದುಕೊಳ್ಳುತ್ತಿದ್ದವು. ಎರಡು ವರ್ಷದಿಂದ ಕಳೆಗುಂದಿದ್ದ ಉತ್ಸವಕ್ಕೆ ಈ ಬಾರಿ ಮೆರಗು ಸಿಗಲಿದೆ.
-ಗಿರೀಶ್ ಗುಡಿಗಾರ,ಮೂರ್ತಿ ತಯಾರಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT