ಮಂಗಳವಾರ, ಮೇ 24, 2022
27 °C

ರಸ್ತೆ, ವೃತ್ತಕ್ಕೆ ಹೆಂಜಾ ನಾಯ್ಕ ಹೆಸರಿಡಲು ಅನುಮತಿ: ರಾಘು ನಾಯ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ನಗರದ ಕೋಡಿಬಾಗ ರಸ್ತೆ ಮತ್ತು ಹೂವಿನ ಚೌಕಕ್ಕೆ ಸೋಂದಾ ಸಾಮ್ರಾಜ್ಯದ ಸೇನಾಧಿಪತಿಯಾಗಿದ್ದ ಹೆಂಜಾ ನಾಯ್ಕ ಅವರ ಹೆಸರಿಡಲು ಸರ್ಕಾರದಿಂದ ಅನುಮತಿ ಸಿಕ್ಕಿದೆ. ಡಿಸೆಂಬರ್ ಒಳಗಾಗಿ ನಾಮಕರಣ ಮಾಡುವುದಾಗಿ ಶಾಸಕಿ ರೂಪಾಲಿ ನಾಯ್ಕ ಭರವಸೆ ನೀಡಿದ್ದಾರೆ’ ಎಂದು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಕೋಡಿಬಾಗದಲ್ಲಿ ಹುಟ್ಟಿ ಬೆಳೆದ ಹೆಂಜಾ ಅವರ ಹೆಸರನ್ನು ನ.15ರ ಒಳಗಾಗಿ ನಾಮಕರಣ ಮಾಡುವಂತೆ ಅಭಿಮಾನಿಗಳ ಬಳಗವು ಆಗ್ರಹಿಸಿತ್ತು. ಈ ಬಗ್ಗೆ ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ಹಾಗೂ ಎಲ್ಲ 31 ಸದಸ್ಯರ ಸಹಮತ ವ್ಯಕ್ತಪಡಿಸಿದ್ದರು. ನಮ್ಮ ಬೇಡಿಕೆಗೆ ಈಗ ಜಯ ಸಿಕ್ಕಿದೆ’ ಎಂದರು.

‘ಹೂವಿನ ಚೌಕದಲ್ಲಿ ಹೆಂಜಾ ನಾಯ್ಕ ವೃತ್ತ ನಿರ್ಮಿಸುವ ಬಗ್ಗೆ ನಗರಸಭೆಯಿಂದ ನಕ್ಷೆ ಸಿದ್ಧಪಡಿಸಲಾಗಿದೆ. ಅಲ್ಲಿರುವ ಹೈಮಾಸ್ಟ್ ವಿದ್ಯುದ್ದೀಪವನ್ನು ಬಳಸಿಕೊಂಡೇ ಕಾಮಗಾರಿ ಮಾಡುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

ನಗರಸಭೆ ಸದಸ್ಯರಾದ ನಂದಾ ನಾಯ್ಕ, ನಿತ್ಯಾನಂದ ನಾಯ್ಕ, ಪ್ರಮುಖರಾದ ರಾಜು ನಾಯ್ಕ, ಮನೋಜ ಬಾಂದೇಕರ್, ಶ್ರೀಪಾದ ನಾಯ್ಕ, ವಿಜಯಕುಮಾರ ನಾಯ್ಕ, ಚಂದ್ರಕಾಂತ ನಾಯ್ಕ, ಮನೋಜ ನಾಯ್ಕ, ಮಹೇಶ ನಾಯ್ಕ, ಜಗನ್ನಾಥ ನಾಯ್ಕ, ಶಂಕರ ಗುನಗಿ, ಶಬ್ಬೀರ್ ಶೇಖ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು