ಕಾರವಾರ: ದೇಶದ ಪಶ್ಚಿಮ ಕಡಲತೀರದಲ್ಲಿ ಅಪರೂಪವಾಗಿರುವ 'ಹಾಕ್ಸ್ ಬಿಲ್' ಜಾತಿಯ ಆಮೆಯೊಂದರ ಕಳೇಬರವು ತಾಲ್ಲೂಕಿನ ತೀಳ್ಮಾತಿ ಬಳಿ ಸಮುದ್ರ ದಂಡೆಯಲ್ಲಿ ಪತ್ತೆಯಾಗಿದೆ. ಈ ಪ್ರಭೇದದ ಆಮೆಗಳು ಹೆಚ್ಚಾಗಿ ಫೆಸಿಪಿಕ್, ಅಟ್ಲಾಂಟಿಕ್ ಸಾಗರ ಹಾಗೂ ಅಂಡಮಾನ್, ನಿಕೋಬಾರ್ ಭಾಗದ ಸಮುದ್ರದಲ್ಲಿ ಕಡಿಮೆ ಆಳದಲ್ಲಿ, ಹವಳದ ದಿಬ್ಬಗಳ ನಡುವೆ ಕಾಣಿಸುತ್ತವೆ.

ಕಾರವಾರದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿ ಇದನ್ನು
ಇಲ್ಲಿ ಪತ್ತೆ ಮಾಡಿದ್ದಾರೆ. ಈ ಆಮೆಯ ಮುಖವು ಗಿಡುಗನ ಮುಖವನ್ನು ಹೋಲುತ್ತದೆ. ದೇಹದ ಮೇಲೆ ಹುಲಿಯ ಶರೀರದಲ್ಲಿರುವಂತೆ ಪಟ್ಟೆಗಳಿವೆ. ಜಾಲಪಾದದಲ್ಲಿ ಎರಡು ಉಗುರುಗಳಿದ್ದು, ನೋಡಲು ತುಂಬ ಆಕರ್ಷಕವಾಗಿದೆ.

'ಈ ಜಾತಿಯ ಆಮೆಗಳು ಸಮುದ್ರದಲ್ಲಿ 4,000 ಕಿಲೋಮೀಟರ್‌ಗೂ ಹೆಚ್ಚು ದೂರ ಸಾಗುವ ಸಾಮರ್ಥ್ಯ ಹೊಂದಿದೆ. ಒಂದು ಮೀಟರ್ ಉದ್ದ,100 ಕಿಲೋಗ್ರಾಮ್‌ವರೆಗೂ ಬೆಳೆಯಬಲ್ಲವು. ಎರಡು, ಮೂರು ವರ್ಷಗಳಿಗೊಮ್ಮೆ ಮೊಟ್ಟೆಯಿಡುತ್ತವೆ' ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

'ಕಾರವಾರದಲ್ಲಿ ಇದೇ ಮೊದಲಬಾರಿಗೆ ಹಾಕ್ಸ್ ಬಿಲ್ ಜಾತಿಯ ಆಮೆ ಪತ್ತೆಯಾಗಿದೆ. ಇದರ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆ ವರದಿ ಸಿಕ್ಕಿದ ಬಳಿಕ ಆಮೆಯ ಸಾವಿಗೆ ಕಾರಣ ತಿಳಿಯಲಿದೆ' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ ಹೇಳಿದ್ದಾರೆ.

ಶಿರಸಿ: ತಂತಿಬೇಲಿಗೆ ಸಿಲುಕಿ ಕಪ್ಪು ಚಿರತೆ ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.