ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯದ ಅಮೃತ ಮಹೋತ್ಸವ: ‘ವಿಕ್ರಮಾದಿತ್ಯ’ದ ಸಿಬ್ಬಂದಿಯ ಸಂಭ್ರಮ

Last Updated 14 ಆಗಸ್ಟ್ 2021, 15:17 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಕದಂಬ ನೌಕಾನೆಲೆಯಲ್ಲಿರುವ ಯುದ್ಧ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದ ಸಿಬ್ಬಂದಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿಒಂದು ವಾರವನ್ನು ‘ದಾನದಲ್ಲಿ ಸಂಭ್ರಮ’ ಎಂಬ ಧ್ಯೇಯದಲ್ಲಿ ಆಚರಿಸಿದರು.

ಆ.9ರಿಂದ ದಾನ, ಕೊಡುಗೆ, ಶ್ರಮದಾನ, ರಕ್ತದಾನ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ನೌಕೆಯ 75 ಸಿಬ್ಬಂದಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ರಕ್ತದಾನ ಮಾಡಿದರು. 75 ಸಿಬ್ಬಂದಿ ಏಳೂವರೆ ಕಿಲೋಮೀಟರ್ ಉದ್ದದ ಕಡಲತೀರದಲ್ಲಿ ಸಸ್ಯಗಳನ್ನು ನೆಟ್ಟರು. ಅಂತೆಯೇ, ನೌಕಾನೆಲೆ ವ್ಯಾಪ್ತಿಯ ಕಡಲತೀರದಲ್ಲಿ ಸ್ವಚ್ಛತೆ ಹಮ್ಮಿಕೊಂಡರು.

ನೌಕೆಯ 750 ಸಿಬ್ಬಂದಿ ಸಂಗ್ರಹಿಸಿದ ₹4 ಲಕ್ಷಕ್ಕೂ ಅಧಿಕ ಹಣವನ್ನು ಜಿಲ್ಲೆಯ ವಿವಿಧ ಶಾಲೆ, ಅನಾಥಾಶ್ರಮಗಳ ದುರಸ್ತಿ, ಸುಣ್ಣ ಬಣ್ಣ ಮಾಡಲು ವ್ಯಯಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT