ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕರ್ನಾಟಕ ತಂಡದಲ್ಲಿ ಹೆಗಡೆಯ ಯುವಕ

ಬ್ಯಾಸ್ಕೆಟ್‌ಬಾಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕುಮಟಾ ತಾಲ್ಲೂಕಿನ ಗಣೇಶ ಗೌಡ
Last Updated 12 ಫೆಬ್ರುವರಿ 2020, 9:02 IST
ಅಕ್ಷರ ಗಾತ್ರ

ಕಾರವಾರ: ‘ಕಂಠೀರವ ಕ್ರೀಡಾಂಗಣದಿಂದ ಬ್ಯಾಸ್ಕೆಟ್‌ಬಾಲ್ ಪಯಣ ಶುರು ಮಾಡಿದೆ. ನಡುವೆ ಗಾಯದ ಸಮಸ್ಯೆ ಕಾಡಿದರೂ ಸುಧಾರಿಸಿಕೊಂಡೆ. ಈಗ ಐದು ತಿಂಗಳು ಮತ್ತೆ ಗಾಯಾಳುವಾದೆ. ಚೇತರಿಕೆ ಕಂಡು ಬಂದಿದ್ದು, ಮತ್ತೊಮ್ಮೆ ತಂಡಕ್ಕೆ ಮರಳಲು ಕಾಯುತ್ತಿದ್ದೇನೆ...’

ಇದು ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದ ನಿವಾಸಿ ಗಣೇಶ ಗೌಡ ಅವರ ಸ್ಫೂರ್ತಿದಾಯಕ ಮಾತು. ಹೆಗಡೆ ಗಂಡುಮಕ್ಕಳ ಶಾಲೆಯಲ್ಲಿ ಕಲಿತು, ನೆಲ್ಲಿಕೇರಿಯಲ್ಲಿ ಪ್ರೌಢಶಾಲೆ ಮುಗಿಸಿದರು. ಈಗ ಬೆಂಗಳೂರಿನಲ್ಲಿ ಕೆಲಸದ ಜೊತೆಗೆ ಬ್ಯಾಸ್ಕೆಟ್‌ಬಾಲ್ ಆಟಗಾರರಾಗಿಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ.

‘ನಾನು ಪ್ರೌಢಶಾಲೆ ಹಂತದಲ್ಲಿರುವಾಗ ವಾಲಿಬಾಲ್ ಆಟಗಾರನಾಗಿದ್ದೆ. ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಓದುತ್ತಿದ್ದ ಸಂದರ್ಭ, ತರಬೇತುದಾರರೊಬ್ಬರು ನನ್ನ ಎತ್ತರವನ್ನು ಗಮನಿಸಿಬ್ಯಾಸ್ಕೆಟ್‌ಬಾಲ್ ಆಡುವಂತೆ ಪ್ರೇರೇಪಿಸಿದರು. ಮೊದಲು ತುಂಬಾ ಯೋಚಿಸಿದೆ. ಅದರಲ್ಲಿ ಭವಿಷ್ಯ ಸಿಗಬಹುದೇ ಎಂಬ ಗೊಂದಲ ನನ್ನನ್ನು ಕಾಡಿತು. ವಿಶ್ವಾಸದಿಂದ ಹೆಜ್ಜೆಯಿಟ್ಟ ಮೇಲೆ ನಾನು ಅದರಲ್ಲಿ ಪಳಗಿದೆ’ ಎಂದು ಗಣೇಶ ಗೌಡ ಹೇಳಿದರು.

‘ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದು ಅತೀವ ಸಂತೋಷ ತಂದಿತ್ತು. 2014ರಲ್ಲಿ ದೆಹಲಿ, 2015ರಲ್ಲಿ ರಾಜಸ್ಥಾನದಲ್ಲಿ, 2016ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯಮಟ್ಟದ ಕ್ರೀಡಾಕೂಟದಲ್ಲಿ ತಂಡವನ್ನು ಪ್ರತಿನಿಧಿಸಿದೆ.ಇದೇ ವರ್ಷ ಮಲೇಷ್ಯಾದಲ್ಲಿ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ಅವಿಸ್ಮರಣೀಯ ಕ್ಷಣ. ಗಾಯಗಳಿಂದ ಚೇತರಿಸಿಕೊಂಡು ಫಿಟ್ನೆಸ್ ಕಾಯ್ದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದೇನೆ’ಎಂದು ಸಂತಸದಿಂದ ಹೇಳಿದರು.

‘ಅಮೆರಿಕಗಿಂತಬಹಳ ಹಿಂದೆ’
‘ನಮ್ಮಲ್ಲಿಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣಗಳೇ ಕಡಿಮೆ. ಗ್ರಾಮೀಣ ಭಾಗಗಳಲ್ಲಂತೂ ಈ ಕ್ರೀಡೆ ಪರಿಚಯವೇ ಇಲ್ಲದಂತಾಗಿದೆ. ಯಾಕೆಂದರೆ ಬೇರೆ ಕ್ರೀಡೆಗಳಂತೆ ಇರುವ ಮೈದಾನಗಳಲ್ಲಿ ಆಡಲು ಸಾಧ್ಯವಿಲ್ಲ. ಇದಕ್ಕೆ ಅಂತಾನೇ ವಿಶೇಷ ಕ್ರೀಡಾಂಗಣದ ವ್ಯವಸ್ಥೆ ಬೇಕು. ಭಾರತವು ಈ ಕ್ರೀಡೆಯಲ್ಲಿ ಅಮೆರಿಕ ದೇಶಕ್ಕಿಂತ 100 ವರ್ಷಗಳಷ್ಟು ಹಿಂದುಳಿದಿದೆ. ಇದಕ್ಕೆ ಕಾರಣ ಕ್ರೀಡಾಂಗಣದ ಕೊರತೆ’ ಎಂದು ಗಣೇಶ ಗೌಡ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT