ಮಂಗಳವಾರ, ಸೆಪ್ಟೆಂಬರ್ 17, 2019
21 °C

ಗೋಕರ್ಣ: ಸಮುದ್ರಕ್ಕೆ ಇಳಿದಿದ್ದ ಕೇರಳದ ಇಬ್ಬರು ನಾಪತ್ತೆ

Published:
Updated:

ಗೋಕರ್ಣ (ಉತ್ತರ ಕನ್ನಡ): ಇಲ್ಲಿನ ಪ್ಯಾರಡೈಸ್ ಕಡಲತೀರದಲ್ಲಿ ನೀರಿಗಿಳಿದಿದ್ದ ಕೇರಳ ಮೂಲದ ಇಬ್ಬರು ನಾಪತ್ತೆಯಾಗಿದ್ದಾರೆ.

ಒಟ್ಟು ಐವರು ಶನಿವಾರ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಕಡಲತೀರಕ್ಕೆ ತೆರಳಿ, ಸಮುದ್ರದಲ್ಲಿ ಈಜಲು ಇಳಿದಿದ್ದಾರೆ.

ಅವರಲ್ಲಿ ಇಬ್ಬರು ಅಲೆಯ ರಭಸಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ಸ್ಥಳೀಯರು ಮತ್ತು ಪೊಲೀಸರಿಂದ ಅವರ ಪತ್ತೆಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.

Post Comments (+)