ಶನಿವಾರ, ಜೂನ್ 19, 2021
23 °C

ಮುರಿದು ಬಿದ್ದ ಕಿರು ಸೇತುವೆ: ಕಾರ್ಮಿಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಇಲ್ಲಿನ ಮೀನು ಪೇಟೆಯ ಹಿಂಬದಿಯಿರುವ ನಾಲೆಯ ಹಳೇ ಕಿರು ಸೇತುವೆ ಗುರುವಾರ ಮುರಿದುಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಹೊಸ ಸೇತುವೆ ಸಲುವಾಗಿ ಅದನ್ನು ತೆರವು ಮಾಡುತ್ತಿದ್ದಾಗ ದುರ್ಘಟನೆ ನಡೆದಿದೆ.

ಸಮೀಪದ ತಾರಮಕ್ಕಿಯ ನಿವಾಸಿ ನಾರಾಯಣ ಗುರವಾ ಗೌಡ (46) ಮೃತರು. 

ಹಳೆಯ ಕಿರು ಸೇತುವೆಯನ್ನು ಜನರು ನಡೆದುಕೊಂಡು ಹೋಗಲು ಬಳಸುತ್ತಿದ್ದರು. ಅದು ಶಿಥಿಲಾವಸ್ಥೆಗೆ ಬಂದಿದ್ದ ಕಾರಣ ಹೊಸ ಸೇತುವೆಯ ಕಾಮಗಾರಿಯನ್ನು ಗ್ರಾಮ ಪಂಚಾಯ್ತಿ ಆರಂಭಿಸಿತ್ತು. ಕಾರ್ಮಿಕರು ದಿನದ ಕೆಲಸ ಮುಗಿಸಿ ಮನೆಗೆ ಹೊರಡಲು ಕೆಲವೇ ಸಮಯವಿದ್ದಾಗ ದುರ್ಘಟನೆ ನಡೆದಿದೆ.

ಘಟನಾ ಸ್ಥಳದಲ್ಲಿ ಒಟ್ಟು ಐವರು ಕೆಲಸ ಮಾಡುತ್ತಿದ್ದರು. ಹಳೆಯ ಸೇತುವೆಯನ್ನು ತೆರವು ಮಾಡುತ್ತಿದ್ದಾಗ ಅದರ ಒಂದು ಭಾಗ ಅಕಸ್ಮಾತ್ ತುಂಡಾಗಿ ನಾರಾಯಣ ಕೆಳಗೆ ಬಿದ್ದರು. ಅವರ ಮೇಲೆ ಸೇತುವೆಯ ಉಳಿದ ಭಾಗವೂ ಬಿದ್ದ ಪರಿಣಾಮ ಮೇಲೇಳಲು ಸಾಧ್ಯವಾಗಲಿಲ್ಲ. ಅವಶೇಷದ ಕೆಳಗೆ ಸಿಲುಕಿದ್ದ ಅವರನ್ನು ಕೂಡಲೇ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.

ಸೌಮ್ಯ ಸ್ವಭಾವದವರಾಗಿದ್ದ ಅವರು ಪ್ರಾಮಾಣಿಕ ಕೆಲಸಗಾರ ಎಂದು ಎಲ್ಲರಿಗೂ ಪರಿಚಿತರಾಗಿದ್ದರು. ಅವರಿಗೆ ‍ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.

ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿ.ಎಸ್.ಐ ನವೀನ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು