ಬುಧವಾರ, ಸೆಪ್ಟೆಂಬರ್ 29, 2021
20 °C
ದರ್ಗಾಕ್ಕೆ ಪ್ರವೇಶಿಸಿದ ಗಣೇಶ ವಿಸರ್ಜನಾ ಮೆರವಣಿಗೆ

ಗಣಪನಿಗೆ ಮೌಲ್ವಿಯಿಂದ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಂಡೇಲಿ (ಉತ್ತರ ಕನ್ನಡ): ಇಲ್ಲಿನ ವಿನಾಯಕ ನಗರದ ಗಜಾನನ ಮಂಡಳಿಯ ಗಣೇಶ ವಿಸರ್ಜನಾ ಮೆರವಣಿಗೆಯು ಮಂಗಳವಾರ ರಾತ್ರಿ ಸಾಗುತ್ತಿದ್ದಾಗ ಅನಿರೀಕ್ಷಿತವಾಗಿ ಮಾರ್ಗಮಧ್ಯದಲ್ಲಿ ದರ್ಗಾ ಪ್ರವೇಶಿಸಿದ ಸಂದರ್ಭದಲ್ಲಿ ಮಸೀದಿಯ ಮೌಲ್ವಿ ಗಣೇಶನಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.

ಐದನೇ ದಿನದ ಗಣೇಶ ವಿಸರ್ಜನಾ ಸಮಯದಲ್ಲಿ ಹಳಿಯಾಳ ರಸ್ತೆಯ ರೋಷನಿ ಮೋಹರಂ ಕಮಿಟಿಯ ದರ್ಗಾದ ಆವರಣದಲ್ಲಿ ಈ ಅಪರೂಪದ ಪ್ರಸಂಗ ನಡೆದಿದೆ.

ಪ್ರತಿ ವರ್ಷವು ತಡ ರಾತ್ರಿಯವರೆಗೆ ಗಣೇಶ ವಿಸರ್ಜನೆಯ ಮೆರವಣಿಗೆ ನಡೆಯುತ್ತಿತ್ತು. ಆದರೆ ಈ ಬಾರಿ ಕೋವಿಡ್ ನಿಯಮಗಳನ್ನು ಪಾಲಿಸುವ ಸಲುವಾಗಿ ಸಂಜೆ 7 ಗಂಟೆಗೇ ಗಣೇಶ ವಿಸರ್ಜನಾ ಮೆರವಣಿಯನ್ನು ಪ್ರಾರಂಭಿಸಲಾಯಿತು. ಗಣೇಶನ ಮೆರವಣಿಗೆ ದರ್ಗಾ ಪ್ರವೇಶಿಸಿದ್ದನ್ನು ಕಂಡು ಮೌಲ್ವಿ ಮುಜಾವರ್ ಇಬ್ರಾಹಿಂ ಗಣಪನಿಗೆ ಕಾಯಿ, ಕರ್ಪೂರ ಅರ್ಪಿಸಿ ಪೂಜೆ ಸಲ್ಲಿಸಿ ಬೀಳ್ಕೊಟ್ಟರು.

ನಗರದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ನಡೆದಿದೆ ಎನ್ನಲಾಗಿದ್ದು ಈ ಸೌಹಾರ್ದದ ಕ್ಷಣಕ್ಕೆ ನೂರಾರು ಜನರು ಸಾಕ್ಷಿಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು