ಭಾನುವಾರ, ಆಗಸ್ಟ್ 1, 2021
22 °C
ಜಿಲ್ಲೆಯಲ್ಲಿ ಮತ್ತಷ್ಟು ಜನರಿಗೆ ಕೋವಿಡ್ 19: ಪ್ರಾಥಮಿಕ ಸಂಪರ್ಕದಿಂದಲೇ ಅಧಿಕ

ಉತ್ತರ ಕನ್ನಡ: 19 ಮಂದಿಗೆ ಕೋವಿಡ್‌ ದೃಢ, 20 ಜನರು ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಬುಧವಾರವೂ ಮುಂದುವರಿದಿದ್ದು, 19 ಮಂದಿಗೆ ಖಚಿತವಾಗಿದೆ. ಈ ನಡುವೆ, ಸೋಂಕಿನಿಂದ 20 ಮಂದಿ ಗುಣಮುಖರಾಗಿದ್ದು, ‘ಕ್ರಿಮ್ಸ್‌’ನ ವಿಶೇಷ ವಾರ್ಡ್‌ನಿಂದ ಬಿಡುಗಡೆಯಾದರು.

ಬುಧವಾರ ಸೋಂಕು ದೃಢಪಟ್ಟವರ ಪೈಕಿ 13 ಮಂದಿ ಭಟ್ಕಳ ತಾಲ್ಲೂಕಿನವರು. ಅವರಲ್ಲಿ ತಲಾ ನಾಲ್ವರು 17121 ಮತ್ತು 17017 ಸಂಖ್ಯೆಯ ಇಬ್ಬರು ರೋಗಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಇಬ್ಬರು ರೋಗಿ ಸಂಖ್ಯೆ 23144ಯ ಪ್ರಾಥಮಿಕ ಸಂಪರ್ಕವಾಗಿದ್ದಾರೆ. ಒಬ್ಬರು ಕುವೈತ್‌ನಿಂದ ಮರಳಿದ್ದರೆ, ಮತ್ತೊಬ್ಬರು ಆಂಧ್ರಪ್ರದೇಶದ ವಿಜಯವಾಡಾದಿಂದ ಬಂದವರು. ಭಟ್ಕಳದ ಸೋಂಕಿತರ ಪೈಕಿ ಒಂದು ವರ್ಷದ ಬಾಲಕ ಸೇರಿದಂತೆ ಆರು ಮಕ್ಕಳೂ ಇದ್ದಾರೆ.

ಯಲ್ಲಾಪುರ ತಾಲ್ಲೂಕಿನಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಒಬ್ಬರಿಗೆ ಜ್ವರ ಲಕ್ಷಣ (ಐ.ಎಲ್.ಐ) ಇದ್ದು ಕೋವಿಡ್ ಖಚಿತವಾಗಿದೆ. ಒಬ್ಬರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರಾಗಿದ್ದು, ಮತ್ತೊಬ್ಬರಿಗೆ ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದು ಸೋಂಕು ಹರಡಿದೆ.

ಹಳಿಯಾಳ ತಾಲ್ಲೂಕಿನಲ್ಲಿ ಇಬ್ಬರಿಗೆ ಖಚಿತವಾಗಿದೆ. ಒಬ್ಬರು 17018 ಮತ್ತು ಮತ್ತೊಬ್ಬರು 17019 ಸಂಖ್ಯೆಯ ರೋಗಿಗಳ ದ್ವಿತೀಯ ಸಂಪರ್ಕವಾಗಿದ್ದಾರೆ. ಕಾರವಾರ ತಾಲ್ಲೂಕಿನ 71 ವರ್ಷದ ಮಹಿಳೆಯೊಬ್ಬರು ಮಂಗಳೂರಿನಿಂದ ಬಂದಿದ್ದು, ಅವರಲ್ಲೂ ಕೋವಿಡ್ ಕಾಣಿಸಿಕೊಂಡಿದೆ. 

20 ಮಂದಿ ಗುಣಮುಖ: ಕೋವಿಡ್‌ನಿಂದ ಗುಣಮುಖರಾದ 20 ಮಂದಿಯನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಾರ್ಡ್‌ನಿಂದ ಬುಧವಾರ ಬಿಡುಗಡೆ ಮಾಡಲಾಯಿತು. 

ಅವರಲ್ಲಿ ತಲಾ ಆರು ಮಂದಿ ಮುಂಡಗೋಡ ಮತ್ತು ಯಲ್ಲಾಪುರದವರು, ದಾಂಡೇಲಿಯ ಮೂವರು, ಕಾರವಾರದ ಇಬ್ಬರು, ಬಳ್ಳಾರಿ, ದಾವಣಗೆರೆ ಹಾಗೂ ವಿಜಯಪುರದ ತಲಾ ಒಬ್ಬರು ಒಳಗೊಂಡಿದ್ದಾರೆ. ಅವರಿಗೆ ‘ಕ್ರಿಮ್ಸ್’ ನಿರ್ದೇಶಕ ಡಾ.ಗಜಾನನ ನಾಯಕ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ಹಾಗೂ ಸಿಬ್ಬಂದಿ ಶುಭ ಹಾರೈಸಿ ಕಳುಹಿಸಿಕೊಟ್ಟರು.

***

ಜಿಲ್ಲೆಯಲ್ಲಿ ಕೊರೊನಾ: ಅಂಕಿ ಅಂಶ

489

ಒಟ್ಟು ಸೋಂಕಿತರು

303

ಸಕ್ರಿಯ ಪ್ರಕರಣಗಳು

184 

ಗುಣಮುಖರಾದವರು

ಮೃತಪಟ್ಟವರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು