ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಡಿ.ಒ ವೇತನದಿಂದ ಭತ್ಯೆ ನೀಡಲು ಶಿಫಾರಸು

Last Updated 7 ಮೇ 2022, 15:49 IST
ಅಕ್ಷರ ಗಾತ್ರ

ಕುಮಟಾ: ಉದ್ಯೋಗ ಖಾತ್ರಿ ಯೋಜನೆಯಡಿ ನೌಕರಿ ನೀಡಲು ನಿರಾಕರಿಸಿದ್ದಕ್ಕೆ, ಅರ್ಜಿದಾರರಿಗೆ ₹ 12,707ಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವೇತನದಿಂದ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಒಂಬುಡ್ಸ್‌ಮನ್ ಆರ್.ಜಿ.ನಾಯಕ ಶಿಫಾರಸು ಮಾಡಿದ್ದಾರೆ.

ತಾಲ್ಲೂಕಿನ ಕೊಡಕಣಿ ಗ್ರಾಮದ ಅರವಿಂದ ಶಾನಭಾಗ ಎನ್ನುವವರು ಉದ್ಯೋಗ ಚೀಟಿ ಹೊಂದಿದ್ದಾರೆ. ಅವರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೇಳಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರಿಗೆ ಕೆಲಸ ಕೊಟ್ಟಿರಲಿಲ್ಲ. ಈ ಬಗ್ಗೆ ಅವರು ಒಂಬುಡ್ಸ್‌ಮನ್‌ಗೆ ದೂರು ನೀಡಿದ್ದರು.

‘ನಾನು ಕೆಲಸ ಕೇಳಿ ಅರ್ಜಿ ಸಲ್ಲಿಸಿದಾಗ ಕೆಲಸಕ್ಕೆ ಹಾಜರಾಗುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ, ಕಳೆದ ವರ್ಷ ಜೂನ್ 19ರಂದು ಕೆಲಸಕ್ಕೆ ಹೋಗಿದ್ದೆ. ಆಗ ನನ್ನನ್ನು ವಾಪಸ್ ಕಳುಹಿಸಿದ್ದರು’ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

‘ನನ್ನ ದೂರಿನ ಪ್ರಕರಣದ ನಿರುದ್ಯೋಗ ಭತ್ಯೆ ಲೆಕ್ಕ ಹಾಕಿ ಪ್ರಸ್ತಾವ ಸಲ್ಲಿಸುವಂತೆ ಒಂಬಡ್ಸುಮನ್ ಅವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಸಿ.ಟಿ. ನಾಯ್ಕ ಅವರಿಗೆ ಸೂಚಿಸಿದ್ದರು. ಆದರೆ, ಅವರು ಅರವಿಂದ ಶಾನಭಾಗ ಅವರಿಗೆ ಎರಡು ಬಾರಿಗೆ ಕೆಲಸಕ್ಕೆ ಹಾಜರಾಗಲು ಸೂಚಿಸಿದ್ದರೂ ಹಾಜರಾಗಿರಲಿಲ್ಲ. ಅವರ ದೂರಿನಲ್ಲಿ ಸತ್ಯಾಂಶವಿಲ್ಲ. ಅವರಿಗೆ ನಿರುದ್ಯೋಗ ಭತ್ಯೆ ಪಾವತಿಸಲು ಅವಕಾಶಲ್ಲ ಎಂದು ತಿಳಿಸಿದ್ದರು’ ಎಂದು ದೂರಿದ್ದರು.

ವಿಚಾರಣೆ ನಡೆಸಿದ ಒಂಬಡ್ಸುಮನ್ ಪಿ.ಡಿ.ಒ ನಾಗರಾಜ ನಾಯ್ಕ ಅವರ ಸಂಬಳದಿಂದ ನಿರುದ್ಯೋಗ ಭತ್ಯೆ ಪಾವತಿಸಲು ಶಿಫಾರಸು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ವರದಿನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT