ಕಾರವಾರ: ಎರಡು ವಾರಗಳ ಹಿಂದೆ ಪ್ರತಿ ಕೆ.ಜಿ.ಗೆ ₹ 60ರಲ್ಲಿ ಮಾರಾಟವಾಗುತ್ತಿದ್ದ ಈರುಳ್ಳಿ ಹಿಂದಿನ ವಾರ₹ 50ಕ್ಕೆ ಇಳಿಕೆಯಾಗಿತ್ತು. ಈ ವಾರವೂ₹ 10ರಷ್ಟು ಇಳಿಕೆ ಕಂಡು₹ 40ರ ದರ ಹೊಂದಿದೆ. ಮೂರು ತಿಂಗಳ ಹಿಂದೆ ಕೆ.ಜಿ.ಗೆ₹ 200ರವರೆಗೂ ಏರಿಕೆಯಾಗಿತ್ತು.

ಟೊಮೆಟೊ ದರ ₹ 10ರಷ್ಟುಕಡಿಮೆಗೊಂಡು₹ 20ರಲ್ಲಿ ಬಿಕರಿಯಾಗುತ್ತಿದೆ.₹ 60ರ ದರದಲ್ಲಿ ಸ್ಥಿರವಾಗಿದ್ದ ಬೀಟ್‌ರೂಟ್ ದರವು ಈಗ₹ 40 ಇದೆ. ಕ್ಯಾರೆಟ್ ದರದಲ್ಲಿ ₹ 80ರಿಂದ ₹70ಕ್ಕೆ ಇಳಿದಿದೆ.ಆಲೂಗಡ್ಡೆ ಪ್ರತಿ ಕೆ.ಜಿ.ಗೆ ₹ 40 ರಿಂದ ₹ 30, ಕ್ಯಾಬೇಜ್₹ 40ರಿಂದ₹ 20, ಬೀನ್ಸ್₹ 60ರಿಂದ₹ 50ಕ್ಕೆ ಇಳಿಕೆ ಕಂಡಿದೆ.

ದಿನಸಿಯಲ್ಲಿ ಬ್ಯಾಡಗಿ ಮೆಣಸು ₹ 240, ಸ್ವಸ್ತಿಕ್ ಅಕ್ಕಿ 25 ಕೆ.ಜಿ.ಯ ಚೀಲಕ್ಕೆ₹ 900, ಪಾಮ್ ಆಯಿಲ್‌ಲೀಟರ್‌ಗೆ ₹ 100, ಸೂರ್ಯಕಾಂತಿ ಎಣ್ಣೆ₹ 110, ಹಸಿರು ಬಟಾಣಿ ₹ 160ರದರದಲ್ಲಿ ಸ್ಥಿರವಾಗಿವೆ.

ಮೀನು ಮಾರುಕಟ್ಟೆಯಲ್ಲಿ ದೊಡ್ಡ ಗಾತ್ರದ ಬಂಗಡೆ₹ 200ಕ್ಕೆ ನಾಲ್ಕರಿಂದ ಐದು, ಕಿಂಗ್‌ಫಿಶ್ ₹ 800ರಿಂದ ₹ 900, ಪಾಂಫ್ರೆಟ್ ಒಂದಕ್ಕೆ₹ 400 ರಿಂದ₹ 500 ಇದೆ. ಫಾರಂ ಕೋಳಿಯ ದರ ₹ 180, ಮಟನ್ ಪ್ರತಿ ಕೆ.ಜಿ.ಗೆ₹ 600 ಹಾಗೂ ಚಿಕನ್ ₹ 200ರಲ್ಲಿಸ್ಥಿರವಾಗಿದೆ.

ಪ್ರತಿ ಕೆ.ಜಿ.ಗೆ₹ 80ರ ದರವಿದ್ದ ಕಿತ್ತಳೆ ಹಣ್ಣು₹ 30ರಷ್ಟು ಇಳಿಕೆ ಕಂಡು₹ 50ರಲ್ಲಿ ಬಿಕರಿಯಾಗುತ್ತಿದೆ. ಇರಾನಿ ಸೇಬಿನ ದರವು₹ 40ರಷ್ಟು ಇಳಿಕೆ ಕಂಡು₹ 160ರಲ್ಲಿ ಗ್ರಾಹಕರಿಗೆ ಸಿಗುತ್ತಿದೆ. ಬಿಳಿ ದ್ರಾಕ್ಷಿ₹ 160ರಿಂದ₹ 80ಕ್ಕೆ ಇಳಿಕೆಯಾಗಿದೆ. ಅಂದರೆ ಶೇ 50ರಷ್ಟು ಇಳಿಕೆ ಕಂಡಂತಾಗಿದೆ. ಕಪ್ಪು ದ್ರಾಕ್ಷಿ₹ 20ರಷ್ಟು ಇಳಿಕೆ ಕಂಡು₹ 160ರಲ್ಲಿ ಮಾರಾಟಗೊಳ್ಳುತ್ತಿದೆ.

ಮಹಾಲಿಂಗಪುರ ಬೆಲ್ಲಕ್ಕೆ ಬೇಡಿಕೆ:ಕಾರವಾರದಲ್ಲಿ ಮಂಡ್ಯದಿಂದ ಆವಕವಾಗುವ ಬೆಲ್ಲಕ್ಕೆ₹ 48 ಹಾಗೂ ಮಹಾಲಿಂಗಪುರದ ಬೆಲ್ಲಕ್ಕೆ₹ 50ರ ದರವಿದೆ.

‘ಮಹಾಲಿಂಗಪುರದ ಬೆಲ್ಲವು ಹೆಚ್ಚು ಗುಣಮಟ್ಟವನ್ನು ಹೊಂದಿದ್ದು, ಅಡುಗೆ ಪದಾರ್ಥಗಳಿಗೆ ಹಾಕಿದಾಗ ಬಣ್ಣ ಕಪ್ಪಾಗುವುದಿಲ್ಲ.ಹಾಗಾಗಿ ಬೆಂಗಳೂರಿನವರೂ ಇಲ್ಲಿಂದ ಕೊಂಡೊಯ್ಯುತ್ತಾರೆ’ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಯೊಬ್ಬರು.

ಇದರ ಜೊತೆಗೆ ಜೋನಿಬೆಲ್ಲವು ಪ್ರತಿ ಕೆ.ಜಿ.ಗೆ ₹ 80 ಹಾಗೂ ಜೇನುತುಪ್ಪ ₹ 270ರಲ್ಲಿ ಬಿಕರಿಯಾಗುತ್ತಿವೆ.

ಅಂಕಿ ಅಂಶ
ಕಾರವಾರ ಮಾರುಕಟ್ಟೆ

ತರಕಾರಿ: ದರ (₹ಗಳಲ್ಲಿ)

ಆಲೂಗಡ್ಡೆ 30

ಟೊಮೆಟೊ 20

ಕ್ಯಾರೆಟ್ 70

ಬೀಟ್‌ರೂಟ್ 40

ಕ್ಯಾಪ್ಸಿಕಂ 50

ಮೆಣಸಿನಕಾಯಿ 50

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.