ಸೋಮವಾರ, ಏಪ್ರಿಲ್ 6, 2020
19 °C

ಸೈನಿಕನ ಸೋಗಿನಲ್ಲಿ ವಂಚನೆ: ಒಂದೇ ವಾರದಲ್ಲಿ ಎರಡು ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ವೆಬ್‌ಸೈಟ್‌ ಒಂದರ ಮೂಲಕ ಬೈಕ್ ಖರೀದಿಸಲು ಮುಂದಾಗಿದ್ದ ಬೈತಖೋಲ್‌ನ ನಿವಾಸಿಯೊಬ್ಬರಿಗೆ ₹ 45 ಸಾವಿರ ವಂಚನೆಯಾಗಿದೆ. ಒಂದು ವಾರದ ಅವಧಿಯಲ್ಲಿ ಸೈನಿಕನ ಸೋಗಿನಲ್ಲಿ ಮೋಸ ಮಾಡಿದ ಮತ್ತೊಂದು ಪ್ರಕರಣ ಇದಾಗಿದೆ.

ಅಲಿಗದ್ದಾ ಸಮೀಪದ ಒಕ್ಕಲಕೇರಿಯ ಸಚಿನ್ ಹರಿಕಂತ್ರ ಮೋಸ ಹೋದವರು. ಒ.ಎಲ್.ಎಕ್ಸ್ ವೆಬ್‌ಸೈಟ್‌ನಲ್ಲಿ ಕೆ.ಟಿ.ಎಂ ಡ್ಯೂಕ್ ಬೈಕ್‌ ಮಾರಾಟಕ್ಕಿರುವ ಬಗ್ಗೆ ಜಾಹೀರಾತನ್ನು ಗಮನಿಸಿದ ಅವರು, ಅದರಲ್ಲಿದ್ದ ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸಿದರು. ಕರೆ ಸ್ವೀಕರಿಸಿದ ವ್ಯಕ್ತಿಯು, ತಾನು ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. 

ಸಚಿನ್‌ ಮೊಬೈಲ್‌ಗೆ ಬೈಕ್‌ನ ಫೋಟೊ ಹಾಗೂ ಇತರ ಮಾಹಿತಿಗಳನ್ನು ಕಳುಹಿಸಿದ ಆರೋಪಿಯು, ತನ್ನ ‘ಪೇಟಿಎಂ’ ಖಾತೆಗೆ ₹ 45 ಸಾವಿರ ಪಾವತಿಸಲು ಸೂಚಿಸಿದ್ದ. ಅದರಂತೆ ಹಣ ಪಾವತಿಸಿದರೂ ಬೈಕ್‌ ಅನ್ನು ಕಳುಹಿಸಿಕೊಟ್ಟಿಲ್ಲ. ಪಾವತಿಸಿದ ಹಣವನ್ನೂ ವಾಪಸ್ ಮಾಡಿಲ್ಲ. ಆರೋಪಿಯು ತನ್ನ ಹೆಸರು, ವಿಳಾಸವನ್ನೂ ತಿಳಿಸಿಲ್ಲ.

ಈ ಬಗ್ಗೆ ಸಚಿನ್ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು