ಬುಧವಾರ, ಏಪ್ರಿಲ್ 21, 2021
32 °C
ಗೇರು ಅಭಿವೃದ್ಧಿ ನಿಗಮದಿಂದ ಪಶ್ಚಿಮಘಟ್ಟದ ನೆಡುತೋಪಿನಲ್ಲಿ ಯಂತ್ರಗಳ ಕಾರ್ಯಾಚರಣೆ

ಶಿರಸಿ: ನೆಡುತೋಪಿನಲ್ಲಿ ಯಂತ್ರ ಬಳಕೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಗೇರು ಅಭಿವೃದ್ಧಿ ನಿಗಮದವರು ಗೇರು ನೆಡುತೋಪುಗಳ ನಿರ್ವಹಣೆಗಾಗಿ ಜೆಸಿಬಿ, ಹಿಟಾಚಿಯಂತಹ ಯಂತ್ರಗಳನ್ನು ಉಪಯೋಗಿಸಿ ಅಪಾರ ಜೀವ ಸಸ್ಯಸಂಕುಲ ನಾಶ ಮಾಡುತ್ತಿದ್ದಾರೆ. ಗೇರು ನಿಗಮವು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಯಂತ್ರ ಉಪಯೋಗಿಸದೇ, ನಿರ್ವಹಣೆ ನಡೆಸಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗೆ ಸೂಚನೆ ನೀಡಿದ್ದಾರೆ.

ಪಶ್ಚಿಮ ಘಟ್ಟದಲ್ಲಿ ಗೇರು ನೆಡುತೋಪು ನಿರ್ಮಿಸಲು 20 ವರ್ಷಗಳ ಹಿಂದೆ ಅರಣ್ಯ ಇಲಾಖೆಯು ಗೇರು ಅಭಿವೃದ್ಧಿ ನಿಗಮಕ್ಕೆ ಸಾವಿರಾರು ಎಕರೆ ಜಾಗ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳ ಕರಾವಳಿ, ಮಲೆನಾಡು ಇಳಿಜಾರು, ನದಿ ಕಣಿವೆಗಳಲ್ಲಿ ಇರುವ ನೆಡುತೋಪುಗಳಲ್ಲಿ ಗೇರು ಗಿಡಗಳ ಜೊತೆ ಸಸ್ಯ ಸಂಕುಲಗಳಿವೆ. ವಿನಾಶದ ಅಂಚಿನಲ್ಲಿರುವ ವೃಕ್ಷಗಳಿವೆ. ಔಷಧ ಸಸ್ಯಗಳು ಸಹ ಇವೆ. ಯಂತ್ರಗಳನ್ನು ಉಪಯೋಗಿಸಿದರೆ, ಇವುಗಳು ನಾಶವಾಗುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಹೊನ್ನಾವರ ತಾಲ್ಲೂಕು ಕರಿಕಾನ ಪರಮೇಶ್ವರಿ ಬೆಟ್ಟ, ಶರಾವತಿ ನದಿ ಪಕ್ಕದ ಖರ್ವಾ ಇಳಿಜಾರು ಬೆಟ್ಟ, ಅಘನಾಶಿನಿ ಕಣಿವೆ ಪ್ರದೇಶ, ಹೊಸನಗರ ತಾಲ್ಲೂಕಿನ ಹನಿಯ ಗುಡ್ಡ, ವಾರಾಹಿ ಇನ್ನೂ ಅನೇಕ ಕಡೆಗಳ ಎತ್ತರ ಬೆಟ್ಟದಲ್ಲಿ ಇಂತಹ ನೆಡುತೋಪುಗಳಿವೆ. ಯಂತ್ರಗಳ ಮೂಲಕ ಇವುಗಳನ್ನು ಸ್ವಚ್ಛಗೊಳಿಸುವ ಕಾಮಗಾರಿಯು ಭೂ ಕುಸಿತಕ್ಕೆ ಕಾರಣವಾಗಬಹುದು. ಹಿಂದೆ ತೀರ್ಥಹಳ್ಳಿ ತಾಲ್ಲೂಕಿನ ಎಡಗುದ್ದೆ ಪ್ರದೇಶದಲ್ಲಿ ಯಂತ್ರಗಳ ಕಾರ್ಯಾಚರಣೆ ನಡೆಸಿದಾಗ, ಸ್ಥಳೀಯರು ಅದನ್ನು ವಿರೋಧಿಸಿದ್ದರು ಎಂದು ಉಲ್ಲೇಖಿಸಿರುವ ಅಶೀಸರ, ಈ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು