ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌತಿ ಹಬ್ಬಕ್ಕೆ ಭರ್ಜರಿ ಸಿದ್ಧತೆ: ಸಾರ್ವಜನಿಕರಿಂದ ಫಲಾವಳಿ ಖರೀದಿ

Last Updated 9 ಸೆಪ್ಟೆಂಬರ್ 2021, 14:38 IST
ಅಕ್ಷರ ಗಾತ್ರ

ಕಾರವಾರ: ಚೌತಿ ಹಬ್ಬದ ಆಚರಣೆಗೆ ನಗರದಲ್ಲಿ ಗುರುವಾರ ಭರ್ಜರಿ ಸಿದ್ಧತೆಗಳು ಕಂಡುಬಂದವು. ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಯಲ್ಲಿ ಸೇರಿದ್ದರು.

ನಗರದ ಗಾಂಧಿ ಮಾರುಕಟ್ಟೆ, ಹೂವಿನ ಚೌಕ, ಸವಿತಾ ಹೋಟೆಲ್ ವೃತ್ತ, ಗಣಪತಿ ದೇವಸ್ಥಾನದ ಸುತ್ತಮುತ್ತ ಹೂವು, ಹಣ್ಣು, ಫಲಾವಳಿಗಳ ಮಾರಾಟ ಜೋರಾಗಿತ್ತು. ಸಾವಿರಾರು ಜನರು ಸೇರಿದ್ದರಿಂದ ರಸ್ತೆಗಳಲ್ಲಿ ವಾಹನ ಮತ್ತು ಜನದಟ್ಟಣೆ ಉಂಟಾಗಿತ್ತು. ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ‍ಪಡಬೇಕಾಯಿತು.

ಫಲಾವಳಿಗಳ ಪ್ರತಿ ಕಟ್ಟು ₹ 50ರಿಂದ ₹ 70ರಂತೆ ಮಾರಾಟವಾದರೆ, ಸಣ್ಣ ಗಾತ್ರದ ಸೇವಂತಿಗೆ ಹೂವಿನ ಒಂದು ಮಾರು ₹ 100, ದೊಡ್ಡ ಗಾತ್ರದ್ದಕ್ಕೆ ₹ 200, ಕೆಂಪು ಸೇವಂತಿಗೆ ₹ 200ರ ಆಸುಪಾಸಿನ ದರದಲ್ಲಿ ಮಾರಾಟವಾದವು.

ಕಾರವಾರ, ಅಂಕೋಲಾ ಭಾಗದಲ್ಲಿ ಚೌತಿ ಹಬ್ಬದ ಸಂದರ್ಭದಲ್ಲಿ ‘ಗುಮಟೆ ಪಾಂಗ್’ ವಿಶೇಷವಾಗಿದೆ. ಈ ಚರ್ಮ ವಾದ್ಯವು ಅಷ್ಟಾಗಿ ಬೇಡಿಕೆ ಪಡೆಯಲಿಲ್ಲ. ₹ 800ರಿಂದ ₹ 1,200ರವರೆಗೂ ದರ ನಿಗದಿಯಾಗಿದ್ದವು. ಆದರೆ, ಕೋವಿಡ್ ಕಾರಣದಿಂದ ಜನ ಆರ್ಥಿಕ ಸಂಕಷ್ಟದಲ್ಲಿದ್ದು, ಖರೀದಿ ಮಾಡುವವರ ಸಂಖ್ಯೆ ಕಡಿಮೆಯಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT