ಬುಧವಾರ, ಸೆಪ್ಟೆಂಬರ್ 22, 2021
29 °C
ಕಾರವಾರದಲ್ಲಿ ಸಾರ್ವಜನಿಕರ ಸಂಚಾರ ಬಹುತೇಕ ಸ್ತಬ್ಧ

ಮನೆಗಳಲ್ಲೇ ಉಳಿದ ಜನ: ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೋವಿಡ್ ನಿಯಂತ್ರಣದ ಸಲುವಾಗಿ ರಾಜ್ಯದಲ್ಲಿ ಬುಧವಾರದಿಂದ ಜಾರಿಯಾಗಿರುವ ಕರ್ಫ್ಯೂಗೆ ಜಿಲ್ಲೆಯ ಜನ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಅನಗತ್ಯವಾಗಿ ಸಾರ್ವಜನಿಕವಾಗಿ ಸಂಚರಿಸದೇ ಮನೆಗಳಲ್ಲೇ ಉಳಿದುಕೊಂಡಿದ್ದಾರೆ.

ಮಂಗಳವಾರ ರಾತ್ರಿ 9 ಗಂಟೆಗೆ ಕರ್ಫ್ಯೂ ಆರಂಭವಾಗುತ್ತಿದ್ದಂತೆ ಪೊಲೀಸರು ನಗರದ ಮುಖ್ಯ ರಸ್ತೆಗಳಲ್ಲಿ, ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಗಸ್ತು ಸಂಚರಿಸಿದರು. ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿ, ಸೋಂಕಿನ ಬಗ್ಗೆ ಜಾಗ್ರತೆ ವಹಿಸುವಂತೆ ತಿಳಿಸಿದರು.

ಹಬ್ಬುವಾಡ ರಸ್ತೆ ಸೇರಿದಂತೆ ಕೆಲವೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪರಿಶೀಲನೆ ನಡೆಸಿದರು. ವೈದ್ಯಕೀಯ ಕಾರಣಗಳಿಗಾಗಿ, ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಸಲುವಾಗಿ, ಖಾಸಗಿ ಕಂಪನಿಗಳ ಕೆಲವು ನೌಕರರು, ಸರ್ಕಾರಿ ನೌಕರರು ಸೇರಿದಂತೆ ವಿನಾಯಿತಿ ನೀಡಲಾದ ವಿಭಾಗಗಳ ಜನರು ಮಾತ್ರ ಸಂಚರಿಸಿದರು.

ಶಾಸಕಿ ಕಚೇರಿ ತಾತ್ಕಾಲಿಕವಾಗಿ ಸ್ಥಗಿತ:

ಶಾಸಕಿ ರೂಪಾಲಿ ಎಸ್.ನಾಯ್ಕ ಅವರ ಕಾರವಾರದ ಕಚೇರಿ ಸಿಬ್ಬಂದಿಗೆ ಕೊರೊನಾ ಸೋಂಕು ಖಚಿತಪಟ್ಟ ಕಾರಣ ಕಾರವಾರದ ಅವರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸೋಂಕಿತರಾದ ಸಿಬ್ಬಂದಿ ಚೇತರಿಸಿಕೊಳ್ಳುತ್ತಿದ್ದು, ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ.

ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಲು ಗುರುಪ್ರಸಾದ ನಾಯ್ಕ: 73497 49432, ಕಿಶನ್ ಕಾಂಬ್ಳೆ: 79754 46717, ಕವನಕುಮಾರ್: 93424 22425 ಅಥವಾ ಮಂಜುನಾಥ ರಾಠೋಡ್: 96329 89428 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಲಸಿಕೆ ಹಾಕಿಸಿಕೊಳ್ಳಲು ವಿನಂತಿ:

‘ಕೋವಿಡ್ ನಿಯಂತ್ರಣಕ್ಕೆ ಸರ್ಕಾರವು ಎಲ್ಲ ಕ್ರಮಗಳನ್ನೂ ಕೈಗೊಂಡಿದೆ. ಆದರೂ ಸೋಂಕಿನ ಎರಡನೇ ಅಲೆ ತೀವ್ರವಾಗಿದೆ. ಕೇವಲ ಜ್ವರ, ನೆಗಡಿ, ಗಂಟಲುನೋವು, ಕೆಮ್ಮು ಅಷ್ಟೇ ಅಲ್ಲ, ಶ್ವಾಸಕೋಶಕ್ಕೂ ದಾಳಿ ಮಾಡುತ್ತಿದೆ. ಇದರಿಂದ ಜನತೆ ಜಾಗರೂಕತೆಯಿಂದ ಇದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.

‘ಸರ್ಕಾರದ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಬೇಕು. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮೇ 1ರಿಂದ 18 ವರ್ಷ ಮೇಲಿನವರಿಗೂ ಲಸಿಕೆ ನೀಡಲಾಗುತ್ತಿದ್ದು, ಕೊರೊನಾ ವೈರಸ್ ನಿಯಂತ್ರಣ ಅಭಿಯಾನಕ್ಕೆ ಕೈಜೋಡಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಜಿಲ್ಲಾಮಟ್ಟದ ಸಹಾಯವಾಣಿ ಸಂಖ್ಯೆಗಳು

ವಿಪತ್ತು ನಿರ್ವಹಣೆ ಟೋಲ್ ಫ್ರೀ: 1077

ಡಿ.ಸಿ. ಕಚೇರಿ ನಿಯಂತ್ರಣ ಕೊಠಡಿ: 08382 229857

ಜಿಲ್ಲಾ ಕೋವಿಡ್ ವಾರ್ ರೂಂ: 08382 295738

ಜಿಲ್ಲಾ ವಿಪತ್ತು ನಿರ್ವಹಣೆ ವಾಟ್ಸ್‌ಆ್ಯಪ್: 94835 11015

ಕೋವಿಡ್: ತಾಲ್ಲೂಕುಗಳಲ್ಲಿ ಅಹವಾಲು ಸ್ವೀಕಾರ ವ್ಯವಸ್ಥೆ

ಕಾರವಾರ: 08382 226331

ಅಂಕೋಲಾ: 08388 230243

ಕುಮಟಾ: 08386 222054

ಹೊನ್ನಾವರ: 08387 220262

ಭಟ್ಕಳ: 08385 226422

ಶಿರಸಿ: 08384 226383

ಸಿದ್ದಾಪುರ: 08389 230127

ಯಲ್ಲಾಪುರ: 08419 261129

ಮುಂಡಗೋಡ: 08301 222122

ಹಳಿಯಾಳ: 08284 220134

ದಾಂಡೇಲಿ: 08284 295959

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು