ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆಯ ಮಣ್ಣು ಮಳೆಯ ಪಾಲು

ಊರಿಗೆ ಸಂಪರ್ಕ ಕಡಿತವಾಗುವ ಆತಂಕದಲ್ಲಿ ಶಿರ್ವೆ ಗ್ರಾಮಸ್ಥರು
Last Updated 18 ಜುಲೈ 2020, 13:43 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿರ್ವೆ ಗ್ರಾಮದಲ್ಲಿಈಚೆಗೆಸುರಿದ ಭಾರಿ ಮಳೆಗೆ ಉಮರಗಡ್ಡೆ– ಸೀತೆಮಕ್ಕಿ ನಡುವೆ ನಿರ್ಮಿಸಲಾದನೂತನಸೇತುವೆಯ ಪಿಚ್ಚಿಂಗ್ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇದರಿಂದ ಗ್ರಾಮಸ್ಥರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ಗ್ರಾಮ ಪಂಚಾಯ್ತಿ ಕಚೇರಿಯಿಂದನಾಲ್ಕುಕಿಲೋಮೀಟರ್ ದೂರದಲ್ಲಿರುವ ಶಿರ್ವೆಯಲ್ಲಿ ಹಾಲಕ್ಕಿ ಒಕ್ಕಲಿಗರು ಹಾಗೂ ಇತರ ಸಮಾಜದವರ 150ಮನೆಗಳಿವೆ.ಅಂದಾಜು 800ಜನರು ವಾಸಿಸುತ್ತಿದ್ದಾರೆ. ಕೃಷಿಯೇ ಜೀವನಕ್ಕೆ ಆಧಾರವಾಗಿರುವ ಅವರಿಗೆ ಅವಶ್ಯಕ ಸಾಮಗ್ರಿ ತರಲು, ಆರೋಗ್ಯ ತಪಾಸಣೆಗೆ ತೆರಳಲು ಈ ಸೇತುವೆ ಮೂಲಕವೇ ದೇವಳಮಕ್ಕಿಗೆಬರಬೇಕಾಗಿದೆ.

ಜುಲೈ 9ರಂದು ಸುರಿದ ಭಾರಿ ಮಳೆಯಿಂದ ನಾಟಿ ಮಾಡಿದ್ದ ಭತ್ತದ ಸಸಿಗಳೂಕೊಚ್ಚಿಕೊಂಡು ಹೋಗಿದ್ದವು. ಹಳ್ಳದಲ್ಲಿ ನೀರು ಉಕ್ಕಿ ಹರಿದು ಉಮರಗಡ್ಡೆ– ಸೀತೆಮಕ್ಕಿ ಸೇತುವೆಯ ಎರಡೂ ಕಡೆಯ ಪಿಚ್ಚಿಂಗ್‌ಗಳು ಕೊಚ್ಚಿಹೋದವು.ಎನ್.ಪಿ.ಸಿ.ಎಲ್ ಈ ಸೇತುವೆಯನ್ನು ನಿರ್ಮಿಸಿದ್ದು, ಕಾಮಗಾರಿ ಪರಿಪೂರ್ಣವಾಗುವ ಹಂತದಲ್ಲಿತ್ತು. ಮಳೆ ಒಂದುವೇಳೆ ಮತ್ತಷ್ಟು ಜೋರಾದರೆ ಸಂಪರ್ಕವೇ ಕಡಿತಗೊಳ್ಳುವ ಆತಂಕವಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿರಾಜೇಶ ಗೌಡ.

ಶಿರ್ವೆ ಗ್ರಾಮದರಿಗೆ ಸಂಪರ್ಕ ಕೊಂಡಿಯಾಗಿರುವಈಸೇತುವೆಯನ್ನು ಸಂಬಂಧ ಪಟ್ಟದವರು ಶೀಘ್ರವೇಸರಿಪಡಿಸಬೇಕು. ವಾಹನ ಸಂಚಾರಕ್ಕೆಯೋಗ್ಯವಾಗುವಂತೆ ಮಾಡಿಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕುಎಂದು ಯುವ ಮುಖಂಡಪ್ರಜ್ವಲ್ ಬಾಬುರಾಯ ಶೇಟ್ ಮನವಿ ಮಾಡಿದ್ದಾರೆ.

ನಗರದಲ್ಲಿ ಭಾರಿ ಮಳೆ: ಕಾರವಾರದಲ್ಲಿ ಶನಿವಾರ ಮಧ್ಯಾಹ್ನ ಭಾರಿ ಮಳೆಯಾಯಿತು. 2.30ರ ಸುಮಾರಿಗೆ ಆರಂಭವಾದ ವರ್ಷಧಾರೆಯು ಸಂಜೆ ಐದರವರೆಗೂ ಮುಂದುವರಿಯಿತು. ನಗರದ ಕೆ.ಎಚ್.ಬಿ ಕಾಲೊನಿ, ಪದ್ಮನಾಭ ನಗರ ಮುಂತಾದೆಡೆ ರಸ್ತೆಗಳಲ್ಲಿ ಒಂದು ಅಡಿಯಷ್ಟು ನೀರು ನಿಂತಿತ್ತು. ಇದರಿಂದ ವಾಹನ ಸವಾರರು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT