ಗುರುವಾರ , ಜನವರಿ 28, 2021
15 °C

ಮೇಳಕ್ಕೆ ಅನುಮತಿ: ನಗರಸಭೆಕ್ರಮ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಂಡೇಲಿ: ಕೊರೊನಾ ಸೋಂಕಿನ ಎರಡನೇ ಅಲೆಯ ಭೀತಿ ಮತ್ತು ಸೋಂಕು ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು ಇಂತಹ ಸಂದರ್ಭದಲ್ಲಿ ನಗರದ ಅಂಬೇವಾಡಿ ಭಾಗದಲ್ಲಿ ಮಿನಿ ಸರ್ಕಸ್ ಮಾದರಿಯ ಮೇಳ ನಡೆಸಲು ನಗರಸಭೆಯಿಂದ ಪರವಾನಿಗೆ ನೀಡಿರುವದನ್ನು ವಿರೋಧಿಸಿ ಸ್ಥಳೀಯ ಬಿ.ಜೆ.ಪಿಯ ಘಟಕದವರು ನಗರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಮನವಿ ಸ್ವೀಕರಿಸಿದ ನಗರಸಭೆಯ ಪ್ರಭಾರ ಪೌರಾಯುಕ್ತ ಶೈಲೇಶ ಪರಮಾನಂದ, ಕಾನೂನಿನಂತೆ ಕ್ರಮ
ಕೈಕೊಳ್ಳುವ ಭರವಸೆ ನೀಡಿದರು. ಬಿಜೆಪಿಯ ಕಾರ್ಯಕರ್ತರು ನಗರಸಭೆಯಲ್ಲಿ ಕಟ್ಟಡ ಪರವಾನಗಿ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿದರು. ಪರವಾನಗಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಆದಷ್ಟು ಬೇಗ ಕೆಲಸ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರಸಭೆಯ ವ್ಯಾಪ್ತಿಯಲ್ಲಿ ಇರುವ ಖಾಲಿ ಜಾಗಕ್ಕೆ ಬೇಲಿ ಹಾಕಿ ಅತಿಕ್ರಮಣ ತಡೆಯುವಂತೆ ಆಗ್ರಹಿಸಿದರು.

ಬಿಜೆಪಿಯ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಗುರು ಮಠಪತಿ, ಉಪಾಧ್ಯಕ್ಷ ರಮೇಶ ಹೊಸಮನಿ,
ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಸುಧೀರ ಶೆಟ್ಟಿ,
ಬುದ್ದಿವಂತಗೌಡಾ ಪಾಟೀಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.