ಮಂಗಳವಾರ, ಸೆಪ್ಟೆಂಬರ್ 21, 2021
21 °C

ಕಲ್ಲೇಶ್ವರ: ದಿನಸಿ ವಿತರಣೆ, ಆರೋಗ್ಯ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ನೆರೆ ಹಾವಳಿಗೆ ತುತ್ತಾಗಿರುವ ಯಲ್ಲಾಪುರ ತಾಲ್ಲೂಕಿನ ಕಲ್ಲೇಶ್ವರ ಭಾಗದಲ್ಲಿ ಸ್ವರ್ಣವಲ್ಲಿ ಶ್ರೀ ಮಾರ್ದರ್ಶನದಂತೆ ಹವ್ಯಕ ಜಾಗೃತ ಕಾರ್ಯಪಡೆಯ ನೇತೃತ್ವದಲ್ಲಿ ಭಾನುವಾರ ದಿನಸಿ ವಿತರಣೆ ಹಾಗೂ ಐ.ಎಂ.ಎ.ಶಿರಸಿ ಘಟಕದ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಕಾರ್ಯ ನಡೆಯಿತು.

ಹೆಗ್ಗಾರ್, ವೈದ್ಯಹೆಗ್ಗಾರ್, ಕಲ್ಲೇಶ್ವರ, ಕೋನಾಳ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳ ಜನರಿಗೆ ನೆರವು ನೀಡಲಾಯಿತು. ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದ ನಡುವೆಯೂ ಸ್ವಯಂ ಸೇವಕರು ಗ್ರಾಮಗಳಿಗೆ ತೆರಳಿದ್ದರು.

ಹವ್ಯಕ ಜಾಗೃತ ಕಾರ್ಯಪಡೆ ಸಂಚಾಲಕ ಸಚ್ಚಿದಾನಂದ ಹೆಗಡೆ, ರಾಘವ ಭಟ್ಟ ಹಿತ್ಲಳ್ಳಿ, ಸತ್ಯನಾರಾಯಣ ಭಟ್ಟ ವರ್ಗಾಸರ, ಗಣಪತಿ ಮೂಲೆಮನೆ, ಪ್ರಶಾಂತ ಹೆಗ್ಗಾರ, ಗ್ರಾಮ ಪಂಚಾಯ್ತಿ ಸದಸ್ಯ ನಾರಾಯಣ ಭಟ್ಟ ಇತರರು ಇದ್ದರು.

ಡಾ.ದಿನೇಶ ಹೆಗಡೆ,‌ ಡಾ. ಸುಮನ್ ಹೆಗಡೆ, ಡಾ.ರವಿಕಿರಣ ಪಟವರ್ಧನ, ಡಾ. ಮಧುಕೇಶ್ವರ ಜಿ. ವಿ., ಡಾ.ಜಿ.ಎಮ್.ಹೆಗಡೆ, ಡಾ.ಕೃಷ್ಣಮೂರ್ತಿ ರಾಯ್ಸದ್, ಡಾ.ವಿಕ್ರಮ್ ಹೆಗಡೆ, ಡಾ.ವಿಶ್ವನಾಥ ಅಂಕದ, ವಿನಾಯಕ ಭಾಗ್ವತ್, ಪ್ರಶಾಂತ ಹೆಗಡೆ ಭಾಗಿಯಾಗಿದ್ದರು.

ಪರಿಹಾರ ವಿತರಣಾ ಕೆಲಸಕ್ಕೆ ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಮತ್ತಿಘಟ್ಟಾದ ಗ್ರೀನ್ ರಿವೈನ್ ಮಾಲೀಕ ಪ್ರಮೋದ ವೈದ್ಯ ನೆರವಾದರು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು