ಬುಧವಾರ, ಆಗಸ್ಟ್ 4, 2021
22 °C

ಉತ್ತರ ಕನ್ನಡ: ರೋಟರಿ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಇಲ್ಲಿನ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಇತ್ತೀಚೆಗೆ ಇಲ್ಲಿ ನಡೆಯಿತು. ಅಧ್ಯಕ್ಷರಾಗಿ ಮಹೇಶ ತೇಲಂಗ, ಕಾರ್ಯದರ್ಶಿಯಾಗಿ ಗಣೇಶ ಹೆಗಡೆ, ಖಜಾಂಚಿಯಾಗಿ ನಾಗರಾಜ ಭಟ್ಟ, ಜಂಟಿ ಕಾರ್ಯದರ್ಶಿಯಾಗಿ ಕಿರಣ ಭಟ್ಟ ಅಧಿಕಾರ ಸ್ವೀಕರಿಸಿದರು.

ಸಾಂಕ್ರಾಮಿಕ ಕಾಯಿಲೆ ಕಾರಣಕ್ಕೆ ಪರಸ್ಪರ ಅಂತರ ಕಾಯ್ದುಕೊಂಡು, ಫೇಸ್‌ಶೀಲ್ಡ್ ಹಾಗೂ ಕೈಗವಸು ಧರಿಸಿ ಎಲ್ಲರೂ ಭಾಗವಹಿಸಿದ್ದರು. ಪದಾಧಿಕಾರಿಗಳು ಮಾತ್ರ ಕಾರ್ಯಕ್ರಮದಲ್ಲಿದ್ದರು. ಜಿಲ್ಲಾ ಪ್ರಾಂತಪಾಲ ಸಂಗ್ರಾಮ ಪಾಟೀಲ ಆನ್‌ಲೈನ್‌ನಲ್ಲಿ ಶುಭ ಹಾರೈಸಿದರು. ಸಹಾಯಕ ಪ್ರಾಂತಪಾಲ ಪ್ರವೀಣ ಕಾಮತ್ ಪದಗ್ರಹಣ ನೆರವೇರಿಸಿದರು. ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಸದಸ್ಯರು ಝೂಮ್ ಆ್ಯಪ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ.ಶಿವರಾಮ ಕೆ.ವಿ, ಡಾ. ದಿನೇಶ ಹೆಗಡೆ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು