ಶನಿವಾರ, ಜೂನ್ 19, 2021
27 °C

ಶಿರಸಿ | ಕನ್ನಡ ಮಾಧ್ಯಮದಲ್ಲಿ ಅಖಿಲಾ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಸಂಪಖಂಡ ಗಜಾನನ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿನಿ ಅಖಿಲಾ ಭಾಸ್ಕರ ಹೆಗಡೆ (622 ಅಂಕ) ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ.

ಕೃಷಿಕ ಕುಟುಂಬದ ಮಹಾಲಕ್ಷ್ಮಿ ಮತ್ತು ಭಾಸ್ಕರ ಹೆಗಡೆ ದಂಪತಿ ಪುತ್ರಿ ಅಖಿಲಾ, ಟ್ಯೂಷನ್ ಕ್ಲಾಸ್‌ಗಳಿಗೆ ಹೋಗದೇ, ಅಂದಿನ ಅಭ್ಯಾಸವನ್ನು ಅಂದೇ ಮಾಡಿಕೊಂಡು, ಉತ್ತಮ ಸಾಧನೆ ಮಾಡಿದ್ದಾಳೆ.

‘ಕೊರೊನಾ ಕಾರಣಕ್ಕೆ ಪರೀಕ್ಷೆ ಮುಂದೂಡಿಕೆಯಾಗಿದ್ದು ನನಗೆ ತುಂಬ ಸಹಾಯವಾಯಿತು. ಪರೀಕ್ಷೆ ನಡೆದೇ ನಡೆಯುತ್ತದೆ ಎಂಬ ವಿಶ್ವಾಸವಿತ್ತು. ಗೊಂದಲಗಳಿದ್ದ ಕೆಲವು ಪಾಠಗಳನ್ನು ಹೆಚ್ಚು ಓದಿಕೊಂಡೆ. ತಿಳಿಯದ ವಿಷಯಗಳನ್ನು ಶಿಕ್ಷಕರ ಬಳಿ, ಅಕ್ಕನ ಬಳಿ ಹೇಳಿಸಿಕೊಳ್ಳುತ್ತಿದ್ದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಬರುವ ವಿಶ್ವಾಸವಿತ್ತು. ನಿರೀಕ್ಷಿತ ಫಲಿತಾಂಶ ಬಂದಿದೆ. ಮುಂದೆ ವಿಜ್ಞಾನ ವಿಷಯ ಆಯ್ದುಕೊಂಡು, ವೈದ್ಯೆಯಾಗುವ ಕನಸಿದೆ’ ಎಂದು ಅಖಿಲಾ ಪ್ರತಿಕ್ರಿಯಿಸಿದಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು