ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಕೊರೊನಾ ಅವಾಂತರ ಕಿರುಚಿತ್ರ

ಹವ್ಯಕ ಕನ್ನಡದಲ್ಲಿ ಸಂಭಾಷಣೆ
Last Updated 25 ಜುಲೈ 2020, 14:41 IST
ಅಕ್ಷರ ಗಾತ್ರ

ಶಿರಸಿ: ಎರಡು ವಾರಗಳಿಂದ ಕೊರೊನಾ ಸೋಂಕು ಗ್ರಾಮೀಣ ಭಾಗಗಳಿಗೂ ವ್ಯಾಪಿಸಿದೆ. ಆದರೆ, ಸೋಂಕಿಗಿಂತ ಹೆಚ್ಚಾಗಿ, ಸುಳ್ಳು ಸುದ್ದಿಗಳ ಹಾವಳಿಯೇ ಹಳ್ಳಿಗರನ್ನು ಕಂಗೆಡಿಸಿದೆ. ಇದನ್ನೇ ಆಧರಿಸಿ, ತಾಲ್ಲೂಕಿನ ಓಣಿಕೇರಿ ಸಮೀಪದ ಜಾಡಿಮನೆಯ ಪ್ರಸಾದ ಹೆಗಡೆ ಮತ್ತು ಸ್ನೇಹಿತರು ಕಿರುಚಿತ್ರ ತಯಾರಿಸಿದ್ದಾರೆ.

‘ಕೊರೊನಾ ಅವಾಂತರ’ ಶೀರ್ಷಿಕೆಯ ಒಂಬತ್ತು ನಿಮಿಷಗಳ ಈ ಕಿರುಚಿತ್ರವು ಹವ್ಯಕ ಕನ್ನಡ ಸಂಭಾಷಣೆಯನ್ನೊಳಗೊಂಡಿದೆ. ಒಂದು ವಾರದಲ್ಲಿ 3000ಕ್ಕೂ ಅಧಿಕ ಜನರು ಈ ಕಿರುಚಿತ್ರವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದಾರೆ. ಗ್ರಾಮಸ್ಥರೆಲ್ಲ ಸೇರಿ ಕಟ್ಟೆ ಪಂಚಾಯಿತಿ ಮಾಡಿರುವ ಸ್ಥಳಗಳಲ್ಲಿ ಕೊರೊನಾ ಸುದ್ದಿ ಸದ್ದು ಮಾಡುತ್ತದೆ. ನಾಲ್ಕೈದು ದಿನಗಳ ನಂತರ ಈ ಸುದ್ದಿ ಸುಳ್ಳೆಂದು ಗ್ರಾಮಸ್ಥರಿಗೆ ಅರಿವಾಗುತ್ತದೆ. ಅಂತೆ–ಕಂತೆಗಳು, ಹಳ್ಳಿಗರ ಆತಂಕ, ಇದರಿಂದ ಉಂಟಾಗುವ ತೊಂದರೆ ಇಂತಹ ಹಲವಾರು ದೈನಂದಿನ ಸಂಗತಿಗಳನ್ನು ಒಳಗೊಂಡಿರುವ ಚಿತ್ರದಲ್ಲಿ ಜಾಡಿಮನೆಯ ಹಿರಿ–ಕಿರಿಯರು ಸೇರಿ 10ಕ್ಕೂ ಹೆಚ್ಚು ಮಂದಿ ಅಭಿನಯಿಸಿದ್ದಾರೆ.

ಮೈಸೂರಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದುತ್ತಿರುವ ಪ್ರಸಾದ ಹೆಗಡೆ, ಲಾಕ್‌ಡೌನ್ ಸಂದರ್ಭದಲ್ಲಿ ಮನೆ ಸೇರಿದ್ದಾರೆ. ಹಳ್ಳಿಯಲ್ಲೇ ಇದ್ದು, ಹಳ್ಳಿಗರನ್ನೇ ಸೇರಿಸಿಕೊಂಡು, ಸಹೋದರ ಉತ್ತಮ ಹೆಗಡೆ ಜೊತೆ ಸೇರಿ ಈ ಕಿರುಚಿತ್ರ ತಯಾರಿಸಿದ್ದಾರೆ. https://youtu.be/haJKdjtneRM ಈ ಲಿಂಕ್‌ನಲ್ಲಿ ಕಿರುಚಿತ್ರ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT