ಭಾನುವಾರ, ಸೆಪ್ಟೆಂಬರ್ 19, 2021
26 °C

ರಂಗಾಪುರದ ಕುಂಬಾರಕಟ್ಟೆ ಕೆರೆ ಭರ್ತಿ: ಕೃಷಿ ಭೂಮಿಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೆ ಕಟ್ಟೆ ಕೆಲವೆಡೆ ಒಡೆದಿದ್ದು ನೀರು ಕೆಳಭಾಗದ ಕೃಷಿಭೂಮಿಗೆ ನುಗ್ಗಿರುವುದು

ಶಿರಸಿ: ತಾಲ್ಲೂಕಿನ ಬನದಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಂಗಾಪುರದ ಕುಂಬಾರಕಟ್ಟೆ ಕೆರೆ ನಿರಂತರ ಮಳೆಯಿಂದ ಭರ್ತಿಯಾಗಿದೆ. ಕೆರೆ ಕಟ್ಟೆ ಕೆಲವೆಡೆ ಒಡೆದಿದ್ದು ನೀರು ಕೆಳಭಾಗದ ಕೃಷಿಭೂಮಿಗೆ ನುಗ್ಗಿದೆ.

ಅಡಿಕೆ ತೋಟ, ಭತ್ತದ ಗದ್ದೆಗಳಿಗೆ ವ್ಯಾಪಕವಾಗಿ ನೀರು ಹರಿಯುತ್ತಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ.

'ಸಣ್ಣ ನೀರಾವರಿ ಇಲಾಖೆಯವರು ಕೆಲ ತಿಂಗಳ ಹಿಂದಷ್ಟೆ ಕೆರೆ ಕಟ್ಟೆ ಕಾಮಗಾರಿ ನಡೆಸಿದ್ದರು. ಕೋಡಿ ಬೀಳಲು ಕಾಲುವೆ ನಿರ್ಮಿಸಿರಲಿಲ್ಲ. ಮಳೆ ಹೆಚ್ಚಿರುವ ಕಾರಣ ಕೆರೆ ಭರ್ತಿಯಾಗಿ ಕಟ್ಟೆ ಅಲ್ಲಲ್ಲಿ ಒಡೆದಿದೆ. ಕಳಪೆ ಕಾಮಗಾರಿ ನಡೆದಿರುವುದು ಸ್ಪಷ್ಟವಾಗುತ್ತಿದೆ' ಎಂದು ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ನಂದಿಕೇಶ್ವರಮಠ ಆರೋಪಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು