ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ ಟಿಎಂಎಸ್‍ಗೆ ₹1.04 ಕೋಟಿ ನಿವ್ವಳ ಲಾಭ

2020–21ನೇ ಸಾಲಿನಲ್ಲಿ 77,309 ಕ್ವಿಂಟಲ್ ಅಡಿಕೆ ವಹಿವಾಟು
Last Updated 11 ನವೆಂಬರ್ 2021, 16:47 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ತಾಲ್ಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರ ಮಾರಾಟ ಸಂಘ ನಿ. (ಶಿರಸಿ ಟಿಎಂಎಸ್) 2020–21ನೇ ಸಾಲಿನಲ್ಲಿ ₹1,04,24,104 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 15ರಷ್ಟು ಲಾಭಾಂಶ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

ಸಂಸ್ಥೆಯ ಸಾಧನೆಯ ಪ್ರಗತಿಯ ಕುರಿತು ಪ್ರಕಟಣೆ ನೀಡಲಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 15,908 ಕ್ವಿಂಟಲ್ ಹಸಿ ಅಡಿಕೆ ವಹಿವಾಟು ಸೇರಿದಂತೆ ಒಟ್ಟು 77,309 ಕ್ವಿಂಟಲ್ ಅಡಿಕೆ ಖರೀದಿ, ಮಾರಾಟ ಪ್ರಕ್ರಿಯೆಯನ್ನು ಸಂಸ್ಥೆ ನಡೆಸಿತ್ತು. ಒಟ್ಟು ₹286 ಕೋಟಿ ವಹಿವಾಟು ನಡೆಸಿ ಈ ಪೈಕಿ ₹6 ಕೋಟಿ ಒಟ್ಟು ಲಾಭ ಗಳಿಸಲಾಗಿದೆ ಎಂದು ವಿವರಿಸಿದ್ದಾರೆ.

ಸಂಸ್ಥೆಯ ದುಡಿಯುವ ಬಂಡವಾಳ ₹148 ಕೋಟಿಗೆ ಏರಿಕೆಯಾಗಿದೆ. ಸ್ವಂತ ಬಂಡವಾಳ ₹3599.77 ಲಕ್ಷಕ್ಕೆ ತಲುಪಿದೆ. ಠೇವಣಿ ಮೊತ್ತ ₹67 ಕೋಟಿಗಿಂತ ಅಧಿಕವಿದೆ. ನೇರ ಖರೀದಿ ವಿಭಾಗದಲ್ಲಿ ₹15,012.39 ಕ್ವಿಂಟಲ್ ಅಡಿಕೆ ಹಾಗೂ ಕಾಳುಮೆಣಸು ಖರೀದಿ, ಮಾರಾಟದಿಂದ ₹44.66 ಕೋಟಿ ವಹಿವಾಟು ನಡೆದಿದೆ.

ಪ್ರಧಾನ ಕಚೇರಿಯ ಕೃಷಿ ವಿಭಾಗದಲ್ಲಿ ₹10.63 ಕೋಟಿ, ಬನವಾಸಿ ಶಾಖೆಯಲ್ಲಿ ₹5.57 ಕೋಟಿ, ದಾಸನಕೊಪ್ಪ ಶಾಖೆಯಲ್ಲಿ ₹3.87 ಕೋಟಿ ವಹಿವಾಟು ನಡೆಸಲಾಗಿದೆ. 14,657 ಸದಸ್ಯರನ್ನು ಹೊಂದಿರುವ ಸಂಸ್ಥೆಯಲ್ಲಿ ಸದಸ್ಯರ ಷೇರು ಬಂಡವಾಳ ₹44,83,900, ಠೇವಣಿ ₹67,79,655 ಹೊಂದಿದೆ.

‘ಸಂಸ್ಥೆಯು ವಿವಿಧ ಬ್ಯಾಂಕುಗಳಲ್ಲಿ ₹52,74,67,592 ಠೇವಣಿ ಹೊಂದಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ನಿಧಿಗಳು ₹4,17,82,550 ರಷ್ಟು ಹೆಚ್ಚಳವಾಗಿದೆ. ಸದಸ್ಯರ ಅಡಿಕೆ ವಹಿವಾಟು ಆಧರಿಸಿ ಸುಮಾರು ₹54,23,803 ಮೊತ್ತದ ಸಹಾಯಧನ ವಿತರಿಸಲಾಗಿದೆ.

ಹಸಿ ಅಡಿಕೆ ಟೆಂಡರ್ ಪ್ರಕ್ರಿಯೆಯನ್ನು ಸತತ ನಾಲ್ಕನೇ ವರ್ಷವೂ ನಡೆಸುತ್ತಿರುವ ಸಂಸ್ಥೆ, ರೈತ ಸದಸ್ಯರ ಆರೋಗ್ಯ ಸುರಕ್ಷತೆಗೆ ‘ಟಿ.ಎಂ.ಎಸ್. ಆರೋಗ್ಯ ವಿಮೆ’ ಯೋಜನೆ ಜಾರಿಗೆ ತಂದಿದೆ. ಕಳೆದ ವರ್ಷ 201 ಸದಸ್ಯರಿಗೆ ₹34,96,200 ಮೊತ್ತದ ಆರೋಗ್ಯ ವಿಮೆ ಸಹಾಯಧನ ನೀಡಲಾಗಿದೆ ಎಂದು ತಿಳಿಸಲಾಗಿದೆ.

ವಾರ್ಷಿಕ ಸಭೆ ನಾಳೆ
ಟಿ.ಎಂ.ಎಸ್. ವಾರ್ಷಿಕ ಸರ್ವಸಾಧರಣ ಸಭೆ ನ.13ರಂದು ಮಧ್ಯಾಹ್ನ 3.30ಕ್ಕೆ ಸಂಸ್ಥೆಯ ವ್ಯಾಪಾರಿ ಸಭಾಂಗಣದಲ್ಲಿ ನಡೆಯಲಿದೆ. ಸಂಜೆ 5.30 ಗಂಟೆಗೆ ಯಕ್ಷರಂಗದ ಪ್ರಸಿದ್ಧ ಕಲಾವಿದರಿಂದ ‘ಮಾರುತಿ ಪ್ರತಾಪ’ ಯಕ್ಷಗಾನ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT