ಸೋಮವಾರ, ಡಿಸೆಂಬರ್ 6, 2021
27 °C
ನಗರ ಮಾದರಿಯಲ್ಲೇ ಮನೆ–ಮನೆಯಿಂದ ಕಸ ಸಂಗ್ರಹ

ಹುಲೇಕಲ್‌ನಲ್ಲಿ ಘನತ್ಯಾಜ್ಯ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಹುಲೇಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಮಂಗಳವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ತಾಲ್ಲೂಕಿನ ಗ್ರಾಮೀಣ ಭಾಗದ ಮೊದಲ ಘಟಕ ಇದಾಗಿದೆ.

ರಾಜ್ಯ ಸರ್ಕಾರ ನೀಡಿರುವ ₹ 10 ಲಕ್ಷ, ಗ್ರಾಮ ಪಂಚಾಯ್ತಿಯ ₹ 2 ಲಕ್ಷ ಅನುದಾನದಲ್ಲಿ ಘಟಕ ನಿರ್ಮಾಣವಾಗಿದೆ. ನಗರದಲ್ಲಿ ಮನೆ–ಮನೆ ಕಸ ಸಂಗ್ರಹಿಸಿದ ಮಾದರಿಯಲ್ಲೇ ಹಳ್ಳಿಮನೆಗಳಿಂದ ಪಂಚಾಯ್ತಿಯ ಒಣ ಕಸವನ್ನು ಮಾತ್ರ ಸಂಗ್ರಹಿಸುತ್ತದೆ. ಇವುಗಳ ಮರುಬಳಕೆ ಹಾಗೂ ಅವುಗಳಿಂದ ಆದಾಯ ಸಂಗ್ರಹಿಸಲು ಪಂಚಾಯ್ತಿ ಯೋಜನೆ ರೂಪಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕಾಗೇರಿ, ‘ಇದು ಒಟ್ಟು ₹ 20 ಲಕ್ಷದ ಯೋಜನೆಯಾಗಿದೆ. ಈಗಾಗಲೇ ₹ 12 ಲಕ್ಷ ವೆಚ್ಚ ಮಾಡಲಾಗಿದೆ. ಬಾಕಿಯಿರುವ ₹ 8 ಲಕ್ಷ ಅನುದಾನವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಗ್ರಾಮೀಣ ಭಾಗದಲ್ಲಿ ತ್ಯಾಜ್ಯಗಳು ಹೆಚ್ಚುತ್ತಿರುವ ಕಾರಣ ಈ ಘಟಕ ಸ್ಥಾಪಿಸಲಾಗಿದೆ. ಗ್ರಾಮೀಣ ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ನಗರ ಪ್ರದೇಶದಂತೆ ಮನೆ ಬಾಗಿಲಿಗೆ ಕಸ ಸಂಗ್ರಹ ವಾಹನ ಬರುತ್ತದೆ. ₹ 6 ಲಕ್ಷ ವೆಚ್ಚದಲ್ಲಿ ಹೊಸ ವಾಹನ ಖರೀದಿಸಲು ಯೋಜನೆ ಸಿದ್ಧವಾಗಿದೆ. ಸದ್ಯಕ್ಕೆ ಬಾಡಿಗೆ ವಾಹನ ಈ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್, ಪಿಡಿಒ ಹರ್ಷ ರಾಥೋಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು