ಮಂಗಳವಾರ, ಮಾರ್ಚ್ 2, 2021
19 °C

ನೌಕಾನೆಲೆಗೆ ಸಂಸದೀಯ ಸ್ಥಾಯಿ ಸಮಿತಿ ಸದಸ್ಯರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಸಂಸತ್ತಿನ ಸ್ಥಾಯಿ ಸಮಿತಿಯ (ರಕ್ಷಣಾ ಇಲಾಖೆ) 16 ಸದಸ್ಯರು, ಅಧ್ಯಕ್ಷ ಜುವಲ್ ಓರಮ್ ನೇತೃತ್ವದಲ್ಲಿ ಇಲ್ಲಿನ ‘ಸೀಬರ್ಡ್’ ನೌಕಾನೆಲೆಗೆ ಬುಧವಾರ ಅಧ್ಯಯನ ಪ್ರವಾಸ ಕೈಗೊಂಡರು.

ಅವರನ್ನು ಕರ್ನಾಟಕ ನೌಕಾ ಪ್ರದೇಶದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಬರಮಾಡಿಕೊಂಡರು. ನೌಕಾಪಡೆಯು ಪ್ರಸ್ತುತ ಅರಬ್ಬಿ ಸಮುದ್ರದಲ್ಲಿ ಕಾರ್ಯ ಸನ್ನದ್ಧ ಸ್ಥಿತಿಯಲ್ಲಿರುವುದು ಮತ್ತು ಕರಾವಳಿ ಭದ್ರತೆಯ ಬಗ್ಗೆ ತಂಡದ ಸದಸ್ಯರು ನೌಕಾಪಡೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಕಾರವಾರದ ‘ಪ್ರಾಜೆಕ್ಟ್ ಸೀಬರ್ಡ್’ ಎರಡನೇ ಹಂತದ ಕಾಮಗಾರಿಯ ಪ್ರಗತಿ ಹಾಗೂ ನೌಕಾಪಡೆಯ ನೌಕೆಗಳ ದುರಸ್ತಿ ಯಾರ್ಡ್‌ನ ಆಧುನೀಕರಣ, ಯುದ್ಧವಿಮಾನ ವಾಹಕ ನೌಕೆ ‘ಐ.ಎನ್.ಎಸ್. ವಿಕ್ರಮಾದಿತ್ಯ’ದ ಸಾಮರ್ಥ್ಯದ ಕುರಿತು  ಅಧಿಕಾರಿಗಳು ವಿವರಿಸಿದರು. ನೌಕೆಗಳನ್ನು ಮೇಲೆತ್ತುವ ಸೌಕರ್ಯದ ಪ್ರಾತ್ಯಕ್ಷಿಕೆ, ಎರಡನೇ ಹಂತದ ಅಭಿವೃದ್ಧಿಯ (ಪ್ರಾಜೆಕ್ಟ್ ಸೀಬರ್ಡ್ ಫೇಸ್ 2 ಎ) ಭಾಗವಾಗಿ ನೌಕಾನೆಲೆಯಲ್ಲಿರುವ ಮೂಲಸೌಕರ್ಯಗಳನ್ನೂ ತಂಡವು ಪರಿಶೀಲಿಸಿತು.

ಕಾರವಾರದಿಂದ ಸಂಜೆ ಪುನಃ ಗೋವಾಕ್ಕೆ ತೆರಳಿದ ಸದಸ್ಯರು, ರಕ್ಷಣಾ ಇಲಾಖೆಯ ಸಾರ್ವಜನಿಕ ವಲಯದ ಉದ್ದಿಮೆಗಳ (ಡಿ.ಪಿ.ಎಸ್.ಯು) ಆಧುನೀಕರಣದ ಬಗ್ಗೆ ಚರ್ಚಿಸಲಿದ್ದಾರೆ. ಸಮಿತಿಯಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಸೇರಿದಂತೆ 21 ಸಂಸದರು ಮತ್ತು 10 ಮಂದಿ ರಾಜ್ಯಸಭೆ ಸದಸ್ಯರಿದ್ದಾರೆ. ರಾಜ್ಯಸಭೆ ಸದಸ್ಯ ಎನ್.ಸಿ.ಪಿ ಮುಖಂಡ ಶರದ್ ಪವಾರ್ ಅವರನ್ನೂ ಸೇರಿದಂತೆ 16 ಮಂದಿ ಮಾತ್ರ ಕಾರವಾರಕ್ಕೆ ಭೇಟಿ ನೀಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು