ಮಂಗಳವಾರ, ಜನವರಿ 26, 2021
28 °C

ಹೂವು ನೀಡಿ ವಿದ್ಯಾರ್ಥಿಗಳಿಗೆ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶುಕ್ರವಾರ ಶಾಲಾ ಆರಂಭೋತ್ಸವ ಕಾರ್ಯಕ್ರಮ ನಡೆಯಿತು.

ಬಹುತೇಕ ಶಾಲೆಗಳನ್ನು ತಳಿರುತೋರಣಗಳಿಂದ ಸಿಂಗರಿಸಿ, ಕೊಠಡಿ ಎದುರಿಗೆ ಹಾಗೂ ಆವರಣದಲ್ಲಿ ಶಿಕ್ಷಕರು ರಂಗೋಲಿ ಬಿಡಿಸಿದ್ದರು.
ಹಲವು ತಿಂಗಳ ಬಿಡುವಿನ ನಂತರ ಶಾಲೆಗೆ ಆಗಮಿಸಿದ ಮಕ್ಕಳನ್ನು ಶಿಕ್ಷಕರು ಹೂವು ನೀಡಿ ಸ್ವಾಗತಿಸಿದರು.

ಪ್ರತಿ ವಿದ್ಯಾರ್ಥಿಯನ್ನು ಪ್ರವೇಶದ್ವಾರದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮಕ್ಕಳು ಕೊಠಡಿಯಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಶಿಕ್ಷಕರು ಹೇಳಿದರು. ಕೆಲವೆಡೆ ವಿದ್ಯಾರ್ಥಿಗಳಿಗೆ ಕೋವಿಡ್ ಕುರಿತು ತಿಳಿವಳಿಕೆ ನೀಡಲಾಯಿತು ಎಂದು ಬಿ.ಇ.ಒ ವಿರುಪಾಕ್ಷ ನಡುವಿನಮನಿ ಹೇಳಿದರು. 'ತಾಲ್ಲೂಕಿನ 61 ಪ್ರಾಥಮಿಕ ಶಾಲೆಗಳಲ್ಲಿ 2078 ವಿದ್ಯಾರ್ಥಿಗಳು ಹಾಗೂ 17 ಪ್ರೌಢಶಾಲೆಗಳಲ್ಲಿ 280 ವಿದ್ಯಾರ್ಥಿಗಳು ಮೊದಲ ದಿನ ಶಾಲೆಗೆ ಬಂದಿದ್ದರು. ಎರಡನೇ ಹಂತದ ವಿದ್ಯಾಗಮ ಅನುಷ್ಠಾನದ ಮೊದಲ ದಿನ ಶೇ.33 ಮಕ್ಕಳು ಬಂದಿದ್ದಾರೆ. ಎಲ್ಲ ಶಾಲೆಗಳಲ್ಲಿ ನಿಯಮದಂತೆ ತರಗತಿ ನಡೆದಿವೆ' ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.