ಗುರುವಾರ , ಜನವರಿ 20, 2022
15 °C

ಶಿರಸಿ: ಮಳೆ ಅವಾಂತರಕ್ಕೆ ಕಬ್ಬಿನ ಗದ್ದೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನಲ್ಲಿ ರಭಸದ ಮಳೆ ಇಳಿಮುಖವಾಗಿದ್ದರೂ ಆಗಾಗ ಬೀಳುವ ಮೂಲಕ ಕೃಷಿ ಚಟುವಟಿಕೆಗೆ ಹಿನ್ನೆಡೆ ಉಂಟುಮಾಡುತ್ತಿದೆ.

ಎರಡು ದಿನಗಳಿಂದ ಸುರಿದ ಮಳೆಯ ಪರಿಣಾಮ ದೇವನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರಗುಪ್ಪದ ರಾಮನಾಥ ನಾಯ್ಕ ಎಂಬುವವರ ಒಂದು ಎಕರೆಯಷ್ಟು ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು ನೆಲಕಚ್ಚಿದೆ. ಮಳೆಯಿಂದ ಭಾರವಾದ ಕಬ್ಬಿನ ಗಿಡಗಳು ಅಲ್ಲಲ್ಲಿ ಮುರಿದು ಬಿದ್ದಿವೆ. ಭತ್ತ, ಮೆಕ್ಕೆಜೋಳದ ಗದ್ದೆಗೆ ಹಾನಿ ಪ್ರಮಾಣ ಏರಿಕೆಯಾಗುತ್ತಿದೆ.

ಮಳೆಯ ರಭಸಕ್ಕೆ ತಾಲ್ಲೂಕಿನಲ್ಲಿ ಸುಮಾರು ನಾಲ್ಕು ಮನೆಗಳಿಗೆ ಹಾನಿ ಉಂಟಾಗಿದೆ. ದಾಸನಕೊಪ್ಪದ ಮಾದೇವಿ ಭೋವಿ ವಡ್ಡರ ಅವರಿಗೆ ಸೇರಿದ ಮನೆಯ ಮುಂಭಾಗ ಕುಸಿದು ಬಿದ್ದಿದೆ. ಮಡಿಕೇಶ್ವರದ ಬಂಗಾರಪ್ಪ ಚೆನ್ನಯ್ಯ ಅವರ ಮನೆಗೆ ಭಾಗಶಃ ಹಾನಿ ಉಂಟಾಗಿದ್ದು,  ಪರಶುರಾಮ ಕೆರಿಯಮ್ಮನವರ ಅವರ ಮನೆಯ ಗೋಡೆ ಪೂರ್ಣ ಕುಸಿದು ಬಿದ್ದಿದೆ. ಜಾನ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನವಿಲಗಾರ ಗ್ರಾಮದ ಗುತ್ಯಾ ಚಲವಾದಿ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು